Header Ads
Breaking News

ಏಸು ಸ್ವಾಮಿಯ ಕಷ್ಟ ಮರಣಗಳ ದೃಶ್ಯಾವಳಿ ನಟನೆಯ ಮೂಲಕ ಪ್ರದರ್ಶನ

ಕ್ರೈಸ್ತರಿಗೆ ಅತೀ ಪವಿತ್ರವೆನಿಸಿದ, 2,000 ವರ್ಷಗಳ ಹಿಂದೆ ಪ್ರಭು ಏಸುವನ್ನು ಶಿಲುಬೆಗೇರಿಸಿದ ಈ ಶುಭಶುಕ್ರವಾರ ಇಂದು ಪ್ರತೀ ವರ್ಷದಂತೆ ಕಾರ್ಕಳ, ಕ್ರೈಸ್ಟ್ ಕಿಂಗ್ ಇಗರ್ಜಿಯಲ್ಲಿ, ಏಸು ಸ್ವಾಮಿಯ ಕಷ್ಟ ಮರಣಗಳ ದೃಶ್ಯಾವಳಿಯನ್ನು ಇಗರ್ಜಿ ವಠಾರದಲ್ಲಿ ನಟನೆಯ ಮೂಲಕ ಪ್ರದರ್ಶಿಸಲಾಯಿತು.

ಚರ್ಚ್ ಧರ್ಮಗುರುಗಳಾದ ವಂ. ಜೋಸ್ವಿ ಫೆನಾಂಡಿಸ್ ಇವರ ಮಾರ್ಗದರ್ಶನದೊಂದಿಗೆ ಚರ್ಚ್ ಸದಸ್ಯರಾದಂತಹ ನೇವಿಲ್ ಡಿ ಸೀಲ್ವಾ ಸಂಯೋಜಿಸಿದ ಈ ಮನಮಿಡಿಯುವ ಪ್ರದರ್ಶನದಲ್ಲಿ 40ಕ್ಕೂ ಮಿಕ್ಕಿ ಚರ್ಚ್ ಸದಸ್ಯರ ಮನೋಜ್ಞ ಅಭಿನಯ ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸಿತು. ಪ್ರಭು ಏಸುವಿನ ಪಾತ್ರದಲ್ಲಿ ದೀಪಕ್ ಡಿಮೆಲ್ಲೊ ರವರು ಅದ್ಭುತ್ತ ನಟನೆ ನೀಡಿದರೆ, ಏಸುವಿನ ಮಾತೆ ಮೇರಿಯ ಪಾತ್ರವನ್ನು ಜೆಸಿಂತಾ ಡಿ ಮೆಲ್ಲೊ ಸುಂದರವಾಗಿ ನಿರ್ವಹಿಸಿದರು.ಮುಖ್ಯ ಸಿಪಾಯಿಗಳ ಪಾತ್ರಗಳನ್ನು ನೀಲ್, ಆಲ್ಬರ್ಟ್, ಎರೊನ್, ರಫಾಯಲ್, ಕ್ಸೇವಿಯರ್ ಲೋಬೊ, ಐವನ್ ಮಚಾದೊ, ವಿನ್ಸೆಂಟ್ ಡಿಸೋಜಾ ಮುಂತಾದವರು ನಿರ್ವಹಿಸಿದರು.

ಏಸುವಿನ ಸಮೀಪದ ಶಿಷ್ಯನಾಗಿ ಡೆನಿಸ್ ಕಾರ್ಡೋಜ, ಸಹಾಯಕ ಸೈಮನ್ ಪಾತ್ರದಲ್ಲಿ ಐವನ್ ಆಗೇರ, ವೆರೊನಿಕಾ ಪಾತ್ರದಲ್ಲಿ ವಿನೀತಾ ಡಿಮೆಲ್ಲೊ ಉತ್ತಮ ನಟನೆ ನೀಡಿದರು. ಇದೇ ವೇಳೆ ಗಾಯನ ಹಾಗೂ ಸುಮೀತ್ ಹಾಗೂ ಶನನ್ ಇವರ ಸಂಗೀತ ಪ್ರದರ್ಶನ ಹೆಚ್ಚಿನ ಮೆರುಗನ್ನು ನೀಡಿತು. ರಾಜೇಶ್ ಮತಾಯಸ್ ಅವರು ಕಾರ್ಯಕ್ರಮಕ್ಕೆ ತಾಂತ್ರಿಕ ಹಿನ್ನೆಲೆ ಸಂಗೀತವನ್ನು ಒದಗಿಸಿದರು. ಕಾರ್ಯಕ್ರಮವನ್ನು ಅಲ್ವೀರಾ ರೇಷ್ಮ, ಮ್ಯಾಕ್ಸಿಮ್ ಡಿಮೆಲ್ಲೊ, ಡೇನಿಸ್ ತವ್ರೊ ಹೆರಾಲ್ಡ್ ಪಾಯ್ಸ್, ಶಾಂತಿ ಟೀಚರ್ ಹಾಗೂ ಸಿ. ರಿಚರ್ಡ್ ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ನಮ್ಮ ಚ್ಯಾನೆಲಿಗೆ ಖಾಸಗಿ ಭೇಟಿ ನೀಡಿದ ಧರ್ಮಗುರುಗಳಾದ ವಂ.ಜೋಸ್ವಿ ಫೆರನಾಂಡಿಸ್ ಇವರು ಈ ದಿನದ ಮಹತ್ವದ ಬಗ್ಗೆ ಮಾಹಿತಿ ಹಾಗೂ ಸಂದೇಶ ನೀಡಿದರು.

Related posts

Leave a Reply

Your email address will not be published. Required fields are marked *