Header Ads
Breaking News

ಐಇಇಇ ಶ್ರೀನಿವಾಸ ವಿಶ್ವವಿದ್ಯಾಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ರಾಷ್ಟ್ರಮಟ್ಟದ ವೆಬಿನಾರ್

ಐಇಇಇ ಶ್ರೀನಿವಾಸ ವಿಶ್ವವಿದ್ಯಾಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ಶೈಕ್ಷಣಿಕ ದೃಷ್ಠಿಕೋನದಿಂದ ಐಇಇಇಯ ಪ್ರಯೋಜನಗಳು ಎಂಬ ವಿಷಯದ ಮೇಲೆ ರಾಷ್ಟ್ರಮಟ್ಟದ ವೆಬಿನಾರ್ ಆಯೋಜಿಸಲಾಯಿತು. ಡಾ. ಆರ್. ತಾಮರೈ ಸೆಲ್ವಿ, ಮುಖ್ಯಸ್ಥರು, ಗಣಕ ವಿಜ್ಞಾನ ಮತ್ತು ಅನ್ವಯಿಕ ವಿಭಾಗ ಹಾಗೂ ಸಹಾಯ ಕಡೀನ್, ಸಂಶೋಧನ ವಿಭಾಗ, ಬಿಷಪ್ ಹೇಬರ್ ಸ್ವಾಯತ್ತ ಕಾಲೇಜು ತಿರುಚಿರಾಪಳ್ಳಿ, ತಮಿಳುನಾಡು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಅವರು ಸಂಶೋಧನಾ ಕ್ಷೇತ್ರದಲ್ಲಿ ಐಇಇಇಯ ಕೊಡುಗೆ ಮಹತ್ತರವಾದುದು. ಪ್ರತಿಯೊಬ್ಬ ಸಂಶೋಧಕನೂ ಐಇಇಇಯ ಸದಸ್ಯನಾಗಿದ್ದಲ್ಲಿ ತನ್ನ ಕ್ಷೇತ್ರದ ಪರಿಣಿತರ ಸಲಹೆ ಐಇಇಇ ಮುಖಾಂತರ ಸುಲಭವಾಗಿ ಪಡೆಯಬಹುದು. ಐಇಇಇಯು ವಿಶ್ವಾಸಾರ್ಹ ಸಂಸ್ಥೆಯಾಗಿದ್ದು 900 ಕ್ಕೂ ಹೆಚ್ಚಿನ ಪತ್ರಿಕೆಗಳನ್ನು ಹೊಂದಿದೆ. ಯಾವುದೇ ಸಂಶೋಧನ ವಿಷಯದ ಮೇಲೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕುವಾಗಲೂ ಒಂದಲ್ಲ ಒಂದು ಐಇಇಇ ಪತ್ರಿಕೆ ಇದ್ದೇ ಇರುತ್ತದೆ. ಐಇಇಇಯಲ್ಲಿ ಸಂಶೋಧನ ಬರವಣಿಗೆಗೆ ಸಹಕಾರಿಯಾಗಬಲ್ಲ ಹಲವಾರು ಸಲಕರಣೆಗಳು ಇವೆ. ಇವುಗಳ ಸಹಾಯದಿಂದ ಸಂಶೋಧನ ವಿದ್ಯಾರ್ಥಿಗಳು ಉತ್ತಮ ಸಂಶೋಧನ ಲೇಖನಗಳನ್ನು ಸುಲಭವಾಗಿ ತಯಾರಿಸಬಹುದಾಗಿದೆ. ಪ್ರತಿಯೊಬ್ಬ ಸಂಶೋಧನ ವಿದ್ಯಾರ್ಥಿಗೂ ತನ್ನ ಸಂಶೋಧನೆಯನ್ನು ಲೇಖನದ ಮೂಲಕ ಪ್ರಕಟಪಡಿಸಲು ಐಇಇಇ ಸಹಕಾರಿಯಾಗಿದೆ. ಐಇಇಇ ಡಿಜಿಟಲ್ ಸಂಪನ್ಮೂಲಗಳ ಆಗರವಾಗಿದೆ. ಅದರ ಸದುಪಯೋಗ ಪಡಿಸಿದಲ್ಲಿ ಉತ್ತಮ ಸಂಶೋಧನ ಲೇಖನಗಳನ್ನು ಪ್ರಕಟಿಸಬಹುದಾಗಿದೆ. ಸಂಶೋಧಕನ ಜ್ಞಾನವೃದ್ಧಿಯಲ್ಲೂ ಐಇಇಇ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಐಇಇಇ ಶ್ರೀನಿವಾಸ ವಿಶ್ವವಿದ್ಯಾಲಯ ವಿದ್ಯಾರ್ಥಿ ಶಾಖೆಯ ಸಲಹೆಗಾರರಾದ ಡಾ. ಎ. ಜಯಂತಿಲಾದೇವಿ ಇವರು ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯ ವಿದ್ಯಾರ್ಥಿ ಶಾಖೆಯ ಸಮಾಲೋಚಕರಾದ ಡಾ. ಕೃಷ್ಣಪ್ರಸಾದ್ ಕೆ. ವಂದಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯ ವಿದ್ಯಾರ್ಥಿ ಶಾಖೆಯ ಸದಸ್ಯರಾದ ಶ್ರೀಮತಿ ದಿವ್ಯ ನವೀನ್ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಸದಸ್ಯರು ಹಾಗೂ ಸಂಶೋಧನ ವಿದ್ಯಾರ್ಥಿಗಳು ಭಾಗವಹಿಸಿದರು.

Related posts

Leave a Reply

Your email address will not be published. Required fields are marked *