Header Ads
Breaking News

ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ದಿನಾಂಕ 02-12-2020ರಂದು ‘ಲಿಟರೇಚರ್ ರಿವ್ಯೂ, ಆ್ಯಂಡ್ ಮೆಥಡ್ಸ್ ಟು ರೈಟ್ ಲಿಟರೇಚರ್ ರಿವ್ಯೂ’ಎಂಬ ವಿಷಯದ ಕುರಿತಾಗಿ ಉಪನ್ಯಾಸ

ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ದಿನಾಂಕ 02-12-2020ರಂದು ‘ಲಿಟರೇಚರ್ ರಿವ್ಯೂ, ಆ್ಯಂಡ್ ಮೆಥಡ್ಸ್ ಟು ರೈಟ್ ಲಿಟರೇಚರ್ ರಿವ್ಯೂ’ಎಂಬ ವಿಷಯದ ಕುರಿತಾಗಿ ಉಪನ್ಯಾಸ ನಡೆಸಲಾಯಿತು. ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ತಿಕ ಮಹಾವಿದ್ಯಾಲದ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ಎಸ್. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅವರು “ಸಂಶೋಧನ ಲೇಖನಗಳ ಸಾರವನ್ನು ಒಂದು ಲಿಟರೇಚರ್ ರಿವ್ಯೂ ಲೇಖನವು ಒಳಗೊಂಡಿರುತ್ತದೆ. ಆದ್ದರಿಂದ ಒಂದು ಲಿಟರೇಚರ್ ರಿವ್ಯೂ ಲೇಖನವನ್ನು ಓದಿದರೆ ನೂರು ಸಂಶೋಧನ ಲೇಖನಗಳನ್ನು ಓದಿದುದಕ್ಕೆ ಸಮನಾಗಿರುತ್ತದೆ. ಲಿಟರೇಚರ್ ರಿವ್ಯೂಗೆ ಸಂಶೋಧನ ಲೇಖನಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ್ರಮಾಣಿತ ಸಂಶೋಧನ ನಿಯತಕಾಲಿಕಗಳಿಂದ ಆಯ್ಕೆ ಮಾಡಿದಲ್ಲಿ ಲೇಖನದ ಗುಣಮಟ್ಟವು ಉತ್ತಮವಾಗಬಲ್ಲುದು. ಸಂಶೋಧನೆಯ ಕ್ಷೇತ್ರವು ವಿಸ್ತಾರವಾಗಿದ್ದಲ್ಲಿ ಒಂದು ವಿಷಯದ ಕುರಿತಾಗಿ ಸಾವಿರಾರು ಲೇಖನಗಳು ಸಿಗುತ್ತವೆ. ಈ ಲೇಖನಗಳನ್ನೆಲ್ಲ ಓದಿ ಸಾರಾಂಶ ಬರೆಯುವುದು ಬಹಳ ಕಷ್ಟ. ಆದ್ದರಿಂದ ಸಂಶೋಧನೆಯ ಕ್ಷೇತ್ರವನ್ನು ಕಿರಿದಾಗಿಸಿದಲ್ಲಿ ಪರಿಣಾಮಕಾರಿ ಲಿಟರೇಚರ್ ರಿವ್ಯೂ ಲೇಖನವನ್ನು ಸಿದ್ಧಗೊಳಿಸಬಹುದು” ಎಂದು ಹೇಳಿದರು. ತಮ್ಮ ಉಪನ್ಯಾಸದಲ್ಲಿ ಲಿಟರೇಚರ್ ರಿವ್ಯೂ ನ ವಿವಿಧ ಹಂತಗಳು, ಸಂಶೋಧನ ಡೇಟಾಬೇಸ್‍ಗಳ ಮಹತ್ವ, ಲಿಟರೇಚರ್ ರಿವ್ಯೂ ಬರೆಯುವ ವಿಧಾನ, ಸಂಶೋಧನ ಲೇಖನ ಹಾಗೂ ಲಿಟರೇಚರ್ ರಿವ್ಯೂ ಗೆ ಇರುವ ವ್ಯತ್ಯಾಸ, ಲಿಟರೇಚರ್ ರಿವ್ಯೂನಲ್ಲಿ ಸಾಫ್ಟ್‍ವೇರ್‍ಗಳ ಸಹಾಯದಿಂದ ಉಲ್ಲೇಖಗಳನ್ನು ಅಳವಡಿಸುವ ವಿಧಾನ ಮುಂತಾದ ವಿಷಯಗಳನ್ನು ಪ್ರಾತ್ಯಕ್ಷಿಕೆಗಳ ಸಹಾಯದಿಂದ ವಿವರಿಸಿದರು. ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಪ್ರಚಾರ ಸಮಿತಿಯ ಸಂಯೋಜಕಿಜೀತಾ ಕೆ. ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು ಹಾಗೂ ವಂದನಾರ್ಪಣೆ ಮಾಡಿದರು. ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸಮಾಲೋಚಕರಾದ ಡಾ. ಕೃಷ್ಣಪ್ರಸಾದ್ ಕೆ. ಮಾರ್ಗದರ್ಶನ ನೀಡಿದರು . ಸುಮಾರು 130 ಸಂಶೋಧನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

Leave a Reply

Your email address will not be published. Required fields are marked *