Header Ads
Breaking News

ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ‘ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಪೇಟೆಂಟ್ ವಿಶ್ಲೇಷಣೆ’ವಿಷಯದ ಕುರಿತಾಗಿ ಉಪನ್ಯಾಸ

ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ದಿನಾಂಕ 04-12-2020ರಂದು ‘ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಪೇಟೆಂಟ್ ವಿಶ್ಲೇಷಣೆ’ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನಡೆಸಲಾಯಿತು. ಡಾ. ಪಿ. ಎಸ್. ಐತಾಳ್, ಉಪಕುಲಪತಿಗಳು, ಶ್ರೀನಿವಾಸ ವಿಶ್ವವಿದ್ಯಾನಿಲಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. “ಪೇಟೆಂಟ್ ವಿಶ್ಲೇಷಣೆಯು ಸಂಶೋಧನೆಯ ಕುತೂಹಲಕಾರಿ ವಿಭಾಗವಾಗಿದೆ. ಪ್ರತಿಯೊಂದು ಪೇಟೆಂಟ್ ಸಹ ಸಂಶೋಧನೆಗೆ ವಿಪುಲ ಅವಕಾಶಗಳನ್ನು ತೆರೆದಿಡುತ್ತದೆ. ಒಂದು ಸಮಸ್ಯೆಯನ್ನು ತಾಂತ್ರಿಕ ರೂಪದಲ್ಲಿ ಬಗೆಹರಿಸಿ ಒಂದು ಹೊಸ ಉತ್ಪನ್ನ ಅಥವಾ ವಿಧಾನವನ್ನು ಕಂಡುಹುಡುಕಿ ಅದರ ಉತ್ಪಾದನೆ ಯಾ ಬಳಸುವಿಕೆಯ ಹಕ್ಕುಗಳನ್ನು ತಾವೇ ಇರಿಸಿಕೊಳ್ಳುವ ಪ್ರಕ್ರಿಯೆಯೇ ಪೇಟೆಂಟ್. ಪೇಟೆಂಟ್‍ನ ಮೌಲ್ಯಮಾಪನವು ಒಂದು ಪೇಟೆಂಟನ್ನು ವಿಮರ್ಷಾತ್ಮಕವಾಗಿ ವಿಶ್ಲೇóಇಸಲು ಸಹಕಾರಿಯಾಗಿದೆ. ಇದು ಇನ್ನೊಂದು ಹೊಸ ಪೇಟೆಂಟ್ ನ ಅವಿಷ್ಕಾರಕ್ಕೂ ಕಾರಣವಾಗಬಹುದು. ಭಾರತೀಯರು ಬಹಳ ಬುದ್ಧಿವಂತರಾಗಿದ್ದರೂ ಅವರಿಗೆ ಪೇಟೆಂಟ್ ಸಲ್ಲಿಸುವಿಕೆಯ ಬಗ್ಗೆ ಅರಿವು ಹಾಗೂ ಪ್ರಚೋದನೆಯ ಕೊರತೆ ಇದೆ. ”ತಮ್ಮ ಉಪನ್ಯಾಸದಲ್ಲಿ ಅವರು ಪೇಟೆಂಟ್ ನ ಮಹತ್ವ, ಪೇಟೆಂಟ್ ಸಲ್ಲಿಸುವಿಕೆಯ ವಿವಿಧ ಹಂತಗಳು, ಪೇಟೆಂಟ್ ವಿಶ್ಲೇಷಣೆಯ ಮಹತ್ವ, ಹಾಗೂ ಪೇಟೆಂಟ್ ವಿಶ್ಲೇಷಣೆಯಲ್ಲಿ ಅಡಕವಾಗಿರಬೇಕಾದ ಅಂಶಗಳು ಮುಂತಾದ ವಿಷಯಗಳ ಕುರಿತಾಗಿ ವಿವರಿಸಿದರು. ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಉಪಾಧ್ಯಕ್ಷ ವಿಜಯರಾಜ್ ಕಾರ್ಯಕ್ರಮ ನಡೆಸಿಕೊಟ್ಟರು. ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸಮಾಲೋಚಕರಾದ ಡಾ. ಕೃಷ್ಣಪ್ರಸಾದ್ ಕೆ. ಮಾರ್ಗದರ್ಶನ ನೀಡಿದರು. ಸುಮಾರು 125 ಸಂಶೋಧನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

Leave a Reply

Your email address will not be published. Required fields are marked *