

ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ದಿನಾಂಕ 05-12-2020 ಹಾಗು 06-12-2020ರಂದು ‘ಸಂಶೋಧನ ಲೇಖನಗಳಲ್ಲಿ ಲ್ಯಾಟೆಕ್ಸ್ ಬಳಕೆ’ ಎಂಬ ವಿಷಯದ ಮೇಲೆ 2 ದಿನದ ಕಾರ್ಯಗಾರವನ್ನುಆಯೋಜಿಸಲಾಯಿತು. ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯಇಲೆಕ್ಟ್ರಿಕಲ್ ಮತ್ತುಇಲೆಕ್ಟ್ರಾನಿಕ್ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಅಬ್ದುಲ್ರಹೆಮಾನ್ರವರು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದರು. ಈ ಕಾರ್ಯಗಾರದಲ್ಲಿಸಂಪನ್ಮೂಲವ್ಯಕ್ತಿಯುಲಾಟೆಕ್ಸ್ ಪ್ರೋಗ್ರಾಂ ಬರೆಯುವುದು, ನಮ್ಮಉದ್ದೇಶಕ್ಕೆ ಅಗತ್ಯವಾದ ಸಾಧನಗಳನ್ನು ಬಳಸುವುದು, ಡಾಕ್ಯುಮೆಂಟ್ ಅನ್ನು ಫಾರ್ಮ್ಯಾಟ್ ಮಾಡುವುದು, ಪ್ಯಾ ಸಮೀಕರಣವನ್ನು ಸೇರಿಸುವುದು, ಪುಟ ಶೈಲಿಗಳನ್ನು ಹೊಂದಿಸುವುದು, ಅಂಕಿಅಂಶಗಳು ಮತ್ತು ಕೋಷ್ಟಕಗಳೊಂದಿಗೆ ಕೆಲಸ ಮಾಡುವುದು, ಗ್ರಂಥಸೂಚಿ ಮತ್ತು ಉಲ್ಲೇಖಗಳನ್ನು ಸೇರಿಸುವುದು, ಐಇಇಇ ಸಂಶೋಧನ ಲೇಖನಗಳ ಟೆಂಪ್ಲೆಟ್ಗಳನ್ನು ಸಂಪಾದಿಸುವುದು ಮತ್ತು ಡೀಬಗ್ ಮಾಡುವ ಬಗ್ಗೆ ವಿವರಿಸಿದರು.
ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯಪ್ರಚಾರ ಸಮಿತಿಯ ಸದಸ್ಯರಾದ ವಿಕ್ರಾಂತ್ ಕೆಕಾರ್ಯಕ್ರಮ ನಡೆಸಿಕೊಟ್ಟರು. ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸಮಾಲೋಚಕರಾದಡಾ. ಕೃಷ್ಣಪ್ರಸಾದ್ ಕೆ. ಮಾರ್ಗದರ್ಶನ ನೀಡಿದರು. ಸುಮಾರು40 ಸಂಶೋಧನ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದರು.