

ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ದಿನಾಂಕ 22-12-2020ರಂದು ‘ಸಂಶೋಧನೆ ಮತ್ತು ಪ್ರಕಟಣೆಯ ನೀತಿ ನಿಯಮಗಳು’ ಎಂಬ ವಿಷಯದಕುರಿತಾಗಿತಾಂತ್ರಿಕಉಪನ್ಯಾಸ ನಡೆಸಲಾಯಿತು. ಮಣಿಪಾಲತಾಂತ್ರಿಕಮಹಾವಿದ್ಯಾಲಯದಕಂಪ್ಯೂಟರ್ಅಪ್ಲಿಕೇಶನ್ಸ್ವಿಭಾಗಮುಖ್ಯಸ್ಥರಾದಡಾ. ಕರುಣಾಕರ್ಎ. ಕೋಟೆಗಾರ್ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ತಮ್ಮಉಪನ್ಯಾಸದಲ್ಲಿ ಅವರು ಸಂಶೋಧಕನು ಅನುಸರಿಸಬೇಕಾದ ನಿಯಮಗಳು ಸಂಶೋಧನಾ ಲೇಖನಗಳನ್ನು ಬರೆಯುವಾಗ ಪಾಲಿಸಬೇಕಾದ ಪ್ರಮುಖ ಅಂಶಗಳು, ಸಂಶೋಧಕ ಮತ್ತು ಸಂಶೋಧನಾ ಮೇಲ್ವಿಚಾರಕರ ನಡುವಿನ ಬಾಂಧವ್ಯದ ಮಹತ್ವ ಮುಂತಾದ ವಿಷಯಗಳ ಬಗ್ಗೆ ವಿವರಣೆ ನೀಡಿದರು.
“ಪಿ. ಹೆಚ್ಡಿ. ಪದವಿಯು ಒಂದು ದೀರ್ಘಕಾಲದ ಸಂಶೋಧನಾ ವೃತ್ತಿ ಜೀವನದ ಭದ್ರಬುನಾದಿಯಾಗಿದೆ. ಸಂಶೋಧಕನು ವಿಭಿನ್ನವಾಗಿ ಯೋಚಿಸುವ ಎದೆಗಾರಿಕೆ ಹೊಂದಿರಬೇಕು. ತನ್ನ ಸಂಶೋಧನಾ ಲೇಖನದಲ್ಲಿ ಬರಹಗಾರನ ಕಿಂಚಿತ್ಕೊಡುಗೆಯಾದರೂ ಇರಬೇಕು. ಸಂಶೋಧನೆಯು ಸುದೀರ್ಘ ಪಯಣ. ಈ ಪಯಣದಲ್ಲಿ ಸಂಶೋಧಕ ಹಾಗೂ ಸಂಶೋಧನಾ ಮೇಲ್ವಿಚಾರಕ ಬಹಳ ದೂರ ಜೊತೆಯಾಗಿ ಕ್ರಮಿಸಬೇಕಾದ್ದರಿದಂದ ಅವರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಸಂಶೋಧಕನುಯೋಗ, ಧ್ಯಾನ, ಹಾಗೂ ನಿಯಮಿತ ವ್ಯಾಯಾಮದ ಮುಖಾಂತರ ಸಂಶೋಧನೆಗೆ ಅಗತ್ಯವಾಗಿರುವ ದೈಹಿಕಕ್ಷಮತೆ ಕಾಪಾಡಿಕೊಳ್ಳಬೇಕು. ತನ್ನ ಸಂಶೋಧನಾ ಕ್ಷೇತ್ರದಲ್ಲಿ ಕೆಲಸಮಾಡುವ ಇತರ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಅವರ ಸಲಹೆಸೂಚನೆಗಳನ್ನು ಪಡೆದಲ್ಲಿ ಸಂಶೋಧನಾ ಕಾರ್ಯಸುಲಭವಾಗುತ್ತದೆ” ಎಂದರು.
ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸಮಾಲೋಚಕರಾದ ಡಾ. ಕೃಷ್ಣಪ್ರಸಾದ್ ಕೆ. ಮಾರ್ಗದರ್ಶನ ನೀಡಿದರು.ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಅಧ್ಯಕ್ಷರಾದ ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು. ಸುಮಾರು 100 ಸಂಶೋಧನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.