Header Ads
Header Ads
Breaking News

ಐಎಂಎ ಮಂಗಳೂರು ಶಾಖೆಯ ನೂತನ ಪದಗ್ರಹಣ ಸಮಾರಂಭ : ಡಿಸಿಎಂ ಡಾ. ಅಶ್ವತ್ಥನಾರಾಯಣರಿಂದ ಕಾರ್ಯಕ್ರಮ ಉದ್ಘಾಟನೆ

ಮಂಗಳೂರಿನ ಭಾರತೀಯ ವೈದ್ಯಕೀಯ ಸಂಘದ ನೂತನ ಪದಗ್ರಹಣ ಸಮಾರಂಭವು ಮಂಗಳೂರಿನ ಅತ್ತಾವರದ ಐಎಂಎಯ ಡಾ. ಎವಿ ರಾವ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರವನ್ನು ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ. ಅಶ್ವತ್ಥನಾರಾಯಣ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು.
ಬಳಿಕ ಮಾತನಾಡಿದ ಅವರು, ಅನುಶೋಧನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಅನುಶೋಧನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಅನ್ನೋವೇಟಿವದ ಅಥಾರಿಟಿ ಆರಂಭಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಅಂತ ಹೇಳಿದ್ರು.
ಐಎಂಎಯ ಮಾಜಿ ಅಧ್ಯಕ್ಷರಾದ ಡಾ.ಬಿ ಸಚ್ಚಿದಾನಂದ ರೈ ಅವರು ನೂತನ ಅಧ್ಯಕ್ಷರಾದ ಡಾ.ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಪದಗ್ರಹಣ ಹಸ್ತಾಂತರಿಸಿದ್ರು. ಬಳಿಕ ಡಾ.ಎಂ ಅಣ್ಣಯ್ಯ ಕುಲಾಲ್ ಮಾತನಾಡಿ ಮುಂದಿನ ಕಾರ್ಯಯೋಜನೆಗಳ ರೂಪುರೇಷೆಗಳನ್ನು ವಿವರಿಸಿದ್ರು.
ಐಎಂಎ ರಾಜ್ಯಾಧ್ಯಕ್ಷ ಡಾ ಮಧುಸೂಧನ ಕರಿಗನೂರು ಅಧ್ಯಕ್ಷೆತೆಯನ್ನು ವಹಿಸಿದ್ರು. ಕಾರ್ಯಕ್ರಮದಲ್ಲಿ ಸಚಿವ ಡಾ. ಅಶ್ವತ್ಥನಾರಾಯಣರಿಗೆ ಹಾಗೂ ಐಎಂಎ ರಾಜ್ಯಾಧ್ಯಕ್ಷ ಡಾ ಮಧುಸೂಧನ ಕರಿಗನೂರು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಎಜೆ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷರಾದ ಡಾ.ಎಜೆ ಶೆಟ್ಟಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರಗ ಎಜ್ಯುಕೇಶನ್‌ನ ಪ್ರೊ ಚಾನ್ಸೆಲ್ಲರ್ ಡಾ.ಹೆಚ್ ಎಸ್ ಬಳ್ಳಾಲ್, ಡಾ.ಸತೀಶ್ ಭಂಡಾರಿ, ಸುಳ್ಯದ ಕೆವಿಜೆ ಮೆಡಿಕಲ್ ಕಾಲೇಜಿನ ಮೆಡಕಲ್ ಡೈರೆಕ್ಟರ್ ಡಾ.ಕೆವಿ ಚಿದಾನಂದ, ಡಾ, ರಘುವೀರ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಚೇರ್‌ಮ್ಯಾನ್ ಯುಕೆ ಮೋನು, ಡಾ. ವೆಂಕಟಾ ಚಲಪತಿ, ಶ್ರೀನಿವಾಸ್ ಉನಿವರ್ಸಿಟಿಯ ಚಾನ್ಸೆಲರ್ ಸಿಎ ಎ ರಾಘವೇಂದ್ರ ರಾವ್ ವಿಶೇಷ ಅತಿಥಿಗಳಾಗಿದ್ರು.
ಕಾರ್ಯಕ್ರಮದಲ್ಲಿ ಐಎಂಎನ ಕಾರ್ಯದರ್ಶಿ ರಶ್ಮಿ ಕುಂದಾಪುರ, ಖಜಾಂಜಿ ಡಾ. ಜಿಕೆ ಭಟ್ ಸಂಕಬಿತ್ತಿಲು, ಮಾಜಿ ಕಾರ್ಯದರ್ಶಿ ಡಾ. ಸುಧೀಂದ್ರ ರಾವ್ ಎಂ, ಮಾಜಿ ಖಜಾಂಜಿ ಡಾ. ವಿನಯ್ ಕುಮಾರ್ ವಿ, ಡಾ.ಕೆವಿ ದೇವಾಡಿಗ, ಡಾ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *