Header Ads
Header Ads
Breaking News

ಐಕೇರ್ ಡೆವೆಲಪರ್‍ಸ್‌ನ ಐಕೇರ್ ಸಿಟಿ ಮಾಲ್ ಗೆ ಶಂಕುಸ್ಥಾಪನೆ ಕಾರ್ಯಕ್ರಮ

ಮೂಡುಬಿದಿರೆ: ಇಲ್ಲಿನ ಪ್ರತಿಷ್ಠಿತ ಐಕೇರ್ ಡೆವೆಲಪರ್‍ಸ್ ಅವರ ‘ಐಕೇರ್ ಸಿಟಿ ಮಾಲ್‌ಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.  ಐಕೇರ್ ಡೆವೆಲಪರ್‍ಸ್‌ನ ಪ್ರವರ್ತಕ ಅಶ್ವಿನ್ ಪಿರೇರಾ ಅವರ ತಂದೆ ವಿನ್ಸೆಂಟ್ ಪಿರೇರಾ ಹಾಗೂ ತಾಯಿ ತೆರೇಸಾ ಪಿರೇರಾ ಶಂಕುಸ್ಥಾಪನೆ ನೆರವೇರಿಸಿದರು. ಮೂಡುಬಿದಿರೆ ಚರ್ಚ್‌ನ ಧರ್ಮಗುರು ಫಾ.ಪೌಲ್ ಸಿಕ್ವೇರಾ ಭೂಮಿ ಪೂಜೆ ನೆರವೇರಿಸಿ, ಆಶೀವರ್ಚನ ನೀಡಿದರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ‘ಐಕೇರ್ ಸಿಟಿ ಮಾಲ್’ನ ಬ್ರೋಶರ್ ಬಿಡುಗಡೆಗೊಳಿಸಿದರು.

ಅಶ್ವಿನ್ ಪಿರೇರಾ ಮಾತನಾಡಿ, ಐಕೇರ್ ಸಿಟಿ ಮಾಲ್ ಮೂಡುಬಿದಿರೆ ಮೊದಲ ಸುಸಜ್ಜಿತ ಮಾಲ್ ಆಗಲಿದೆ. ಮೂಡುಬಿದಿರೆಯ ಜನರು ಇತರ ನಗರಗಳ ಮಾಲ್‌ಗಳನ್ನು ಅವಲಂಬಿಸಿದ್ದು, ಐಕೇರ್ ಸಿಟಿ ಮಾಲ್ ಮೂಡುಬಿದಿರೆಯಲ್ಲೇ ಜನರಿಗೆ ಸೇವೆ ನೀಡುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಐಕೇರ್ ಸಿಟಿ ಮಾಲ್ ಪ್ರಾಜೆಕ್ಟ್ ಪೂರ್ಣಗೊಳ್ಳಲಿದೆ ಎಂದರು.ಐಕೇರ್ ಡೆವೆಲಪರ್‍ಸ್‌ನ ಪಾಲುದಾರರಾದ ಮೆಲಿಸ್ಸಾ ಡಿ’ಸೋಜ, ಫಾ.ಫ್ರಾಂಕ್ ವಾಲ್ಡರ್, ಜಾಗದ ವಾರಿಸೂದಾರ ಜಾನ್ ಪಿಂಟೋ, ಅಬ್ದುಲ್ ರಝಾಕ್, ಪಂಡಿತ್ ರೆಸಾರ್ಟ್ ಪಾಲುದಾರ ಗೋಯಲ್ ಸಹಿತ ಗಣ್ಯರಯ ಉಪಸ್ಥಿತರಿದ್ದರು.

Related posts

Leave a Reply