Header Ads
Header Ads
Breaking News

ಐಟಿ ಉದ್ಯೋಗ ಕಡಿತದ ಬಗೆಗೆ ಆತಂಕ, ಮಂತ್ರಿ ಖರ್ಗೆಯವರನ್ನು ಭೇಟಿಯಾದ ಐಟಿ ಉದ್ಯೋಗಿಗಳು

ಐಟಿ ವಲಯದ ಉದ್ಯೋಗ ಕಡಿತದ ವಿರುದ್ಧ?ಧ್ವನಿ ಎತ್ತಿದ್ದ ಐಟಿ ಉದ್ಯೋಗಿಗಳ ವೇದಿಕೆ ‘ಎಫ್‌ಐಟಿ‌ಇ’ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಸಜ್ಜಾಗಿದೆ.
ಐಟಿ ಉದ್ಯೋಗ ಕಡಿತ ಸಮಸ್ಯೆ ಬಗೆಹರಿಸಲು ಸರ್ಕಾರದ ಮಧ್ಯೆ ಪ್ರವೇಶಕ್ಕೆ ಒತ್ತಾಯಿಸಿ ಎಫ್‌ಐಟಿ‌ಇ ಪದಾಧಿಕಾರಿಗಳು ಸೋಮವಾರ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು. ಐಟಿ ಕಂಪೆನಿಗಳನ್ನು ಕಾರ್ಮಿಕ ಕಾನೂನು ವ್ಯಾಪ್ತಿಗೆ ತರುವುದೂ ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳನ್ನು ವೇದಿಕೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಮಂಡಿಸಲಿದೆ. ಐಟಿ ಕಂಪೆನಿಗಳನ್ನು ಇನ್ನೂ ಐದು ವರ್ಷಗಳ ಕಾಲ ಕಾರ್ಮಿಕ ಕಾನೂನು ವ್ಯಾಪ್ತಿಯಿಂದ ಹೊರಗಿಟ್ಟು ಕೈಗಾರಿಕಾ ವ್ಯಾಜ್ಯ ಇತ್ಯರ್ಥ ಕಾಯಿದೆ ಅಡಿ ತರಲು ರಾಜ್ಯ ಸಚಿವ ಸಂಪುಟ ೨೦೧೩ರ ಅಕ್ಟೋಬರ್ನಲ್ಲಿ ನಿರ್ಧಾರ ಕೈಗೊಂಡಿತ್ತು.
ಕೌಶಲ ಕೊರತೆಯ ನೆಪವೊಡ್ಡಿ ಸಿಬ್ಬಂದಿಯಿಂದ ಬಲವಂತವಾಗಿ ರಾಜೀನಾಮೆ ಪಡೆಯುವುದನ್ನು ತಕ್ಷಣ ನಿಲ್ಲಿಸಬೇಕು. ಸಿಬ್ಬಂದಿಗೆ ಅಗತ್ಯ ಕೌಶಲ ತರಬೇತಿ ನೀಡುವತ್ತ ಐಟಿ ಕಂಪೆನಿಗಳು ಗಮನ ಹರಿಸಬೇಕು ಎಂದು ಎಫ್‌ಐಟಿ‌ಇ ಬೆಂಗಳೂರು ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಶಕಗಳಿಂದ ಐಟಿ ಕಂಪೆನಿಗಳಿಗೆ ನೀಡುತ್ತಿರುವ ರಿಯಾಯ್ತಿಗಳನ್ನು ತಕ್ಷಣ ನಿಲ್ಲಿಸಬೇಕು. ೧೨-೧೪ ಗಂಟೆ ಕೆಲಸದ ಅವಧಿಯನ್ನು ಕಡಿತಗೊಳಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಈಗಾಗಲೇ ಬೆಂಗಳೂರು ಕಾರ್ಮಿಕ ಆಯುಕ್ತರಿಗೆ ಸಲ್ಲಿಸಿರುವುದಾಗಿ ವೇದಿಕೆ ಹೇಳಿದೆ.

Related posts

Leave a Reply