Header Ads
Header Ads
Header Ads
Breaking News

ಐವರ್ನಾಡಿನ ಪಿ.ಡಿ.ಒ ಏಕಾ‌ಏಕಿ ವರ್ಗಾವಣೆ ರಾಜಕೀಯ ದುರುದ್ದೇಶದಿಂದ ಪಿಡಿ‌ಒ ವರ್ಗಾವಣೆ ನೂತನ ಪಿ.ಡಿ.ಒರನ್ನು ಚಾರ್ಜ್ ತೆಗೆದುಕೊಳ್ಳಲು ಬಿಡದ ಊರವರು

ಐವರ್ನಾಡು ಪಿ.ಡಿ.ಒ ಶೇಖರ್ ಅವರನ್ನು ಏಕಾ‌ಏಕಿ ರಾಜಕೀಯ ದುರುದ್ದೇಶದಿಂದ ವರ್ಗಾವಣೆ ಮಾಡಿರುವುದು ಎಂದು ಆರೋಪಿಸಿ ಸ್ಥಳೀಯರು ಅಧಿಕಾರ ಸ್ವೀಕರಿಸಲು ಬಂದ ಮುರಳೀಧರ ಅವರನ್ನು ಸ್ಥಳೀಯರು ಅಧಿಕಾರ ತೆಗೆದುಕೊಳ್ಳಲು ಬಿಡದೆ ಹಿಂದಕ್ಕೆ ಕಳುಹಿಸಿದ ಘಟನೆ ವರದಿಯಾಗಿದೆ.

ಐವರ್ನಾಡಿನ ಕಾಂಗ್ರೆಸ್‌ನ ಏಕ ವ್ಯಕ್ತಿಯ ಮಾತಿಗೋಷ್ಕರ ಒಳ್ಳೆಯ ಆಡಳಿತಗಾರರಾದ ಪಿ.ಡಿ.ಒ ಶೇಖರ್ ಅವರನ್ನು ಇಲ್ಲಿಂದ ಯಾವುದೇ ಕಾರಣವಿಲ್ಲದೆ ಏಕಾ‌ಏಕಿ ವರ್ಗಾಣೆ ಮಾಡಿದ್ದಾರೆ.ಇದರಲ್ಲಿ ರಾಜಕೀಯ ದುರುದ್ದೇಶ ಇದೆ. ಐವರ್ನಾಡು ಗ್ರಾಮಕ್ಕೆ ಗಾಂಧಿ ಪುರಸ್ಕಾರ ದೊರೆತ್ತಿದ್ದು ಇದಕ್ಕೆ ಕಾರಣ ಇಲ್ಲಿಯ ಪಿ.ಡಿ.ಒ ಅದರ ಪ್ರಶಸ್ತಿ ಪ್ರಧಾನ ಸಮಾರಂಭ ಅಕ್ಟೋಬರ್ 2 ರಂದು ನಡೆಯಲ್ಲಿದ್ದು ಆ ದಿವಸ ನಮ್ಮ ಪಿ.ಡಿ.ಒ ಬೇಕಾಗುತ್ತದೆ. ಅಲ್ಲಿಯ ತನಕವಾದರೂ ಪಿ.ಡಿ.ಒ ಬೇಕು.ಹೊಸ ಪಿ.ಡಿ.ಒಗಳನ್ನು ಇಲ್ಲಿ ಚಾರ್ಜ್ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ನಡೆದಿದೆ.

Related posts

Leave a Reply