Header Ads
Header Ads
Header Ads
Breaking News

ಐವರ್ನಾಡು ಪಂಚಾಯತ್ ಪಿ.ಡಿ.ಒ ವರ್ಗಾವಣೆಗೆ ವಿರೋಧ ಸುಳ್ಯದಲ್ಲಿ ಅ. 9ರಂದು ಬೃಹತ್ ಪ್ರತಿಭಟನೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿಕೆ

ಸುಳ್ಯದ ಐವರ್ನಾಡು ಗ್ರಾಮ ಪಂಚಾಯತ್‌ನ ಅಧಿಕಾರಿಯ ಅಭಿವೃದ್ಧಿ ಕಾರ್ಯವನ್ನು ಸಹಿಸದೇ ಕಾಂಗ್ರೆಸ್ಸಿನ ಮುಖಂಡರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ವರ್ಗಾವಣೆಗೊಳಿಸಿದ ಕ್ರಮದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಅ. 9ರಂದು ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಂಡಲ ಸಮಿತಿ ಅದ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ರು. ಈ ಕುರಿತು

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯು.ಡಿ. ಶೇಖರ್ ಅವರು ಒಬ್ಬ ನಿಷ್ಠಾವಂತ ಅಧಿಕಾರಿ. ಅವರ ಶ್ರಮದಿಂದ ಗ್ರಾಮ ಎಲ್ಲಾ ರಂಗದಲ್ಲಿ ಅಭಿವೃದ್ದಿ ಹೊಂದಿ ಪಂಚಾಯತ್‌ಗೆ ಗಾಂಧಿ ಪುರಸ್ಕಾರ ಪಡೆದಿದೆ. ಕೆಲವು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಅವರನ್ನು ಸುಬ್ರಹ್ಮಣ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅವರ ವರ್ಗಾವಣೆಯಿಂದ ಪಂಚಾಯತ್‌ನ ಎಲ್ಲಾ ಅಭಿವೃದ್ದಿ ಕೆಲಸಗಳು ಸ್ಥಗಿತಗೊಂಡಿದೆ ಎಂದು ಅವ್ರು ಹೇಳಿದರು. ಈ ವೇಳೆ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಪ್ರಕಾಶ್ ಹೆಗ್ಡೆ, ನವೀನ್ ರ್‍ಯ ಮೇನಾಲ, ತಾ.ಪಂ ಸದಸ್ಯರಾದ ಜಾಹ್ನವಿ ಕಾಂಚೋಡು, ಪುಷ್ಪಾ ಮೇದಪ್ಪ ನವೀನ್ ರೈ ಮೇನಾಲ, ಹರೀಶ್ ರೈ ಉಬರಡ್ಕ, ಭಾಗೀರಥಿ ಮುರುಳ್ಯ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply