Header Ads
Header Ads
Breaking News

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾಮಹೋತ್ಸವ

ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾಮಹೋತ್ಸವ ಫೆಬ್ರವರಿ 5ರಿಂದ ಪ್ರಾರಂಭಗೊಂಡು ಫೆಬ್ರವರಿ 11ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.ಒಂದೇ ಪಾಣಿ ಪೀಠದಲ್ಲಿ ಐದು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಪಂಚಲಿಂಗೇಶ್ವರನೆಂದು ಶಿವನನ್ನು ಆರಾಧಿಸುವ ಪದ್ದತಿ ತುಳುನಾಡಿನ ಸಂಪ್ರದಾಯಗಳೊಂದಾಗಿದೆ. ವಾಮದೇವ, ಅಘೋರ, ತತ್ವರುಷ, ಸದ್ಯೋಜಾತ ಹಾಗೂ ಈಶಾನ ಎಂಬ ಶಿವನ ಪಂಚರೂಪಗಳನ್ನು ಪ್ರತಿನಿಧಿಸುತ್ತದೆ. ಈ ರೀತಿಯ ಆರಾಧನಾ ಕ್ಷೇತ್ರ ಕಾರ್ಣಿಕದ ಪಂಚಲಿಂಗೇಶ್ವರ ದೇವಾಲಯ ಐರ್ವನಾಡು ಹಸಿರ ಸಿರಿಯ ಮದ್ಯೆ ಕಂಗೊಳಿಸುತ್ತದೆ.

ಹಲವು ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿದ್ದ ಪಾಲೆಪ್ಪಾಡಿ ಗಣಪಯ್ಯ ಭಟ್ ಅವರು ಅಭಿವೃದ್ದಿ ಕೆಲಸವನ್ನು ಕೈಗೆತ್ತಿಕೊಂಡಿದ್ದರು.
ಈ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಸ್.ಎನ್. ಮನ್ಮಥ ಅವರು ಮಾತನಾಡಿ, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದ್ದು, ಹಸಿರುವಾಣಿ ಹೊರೆಕಾಣಿಕೆಯನ್ನು ಮೆರವಣಿಗೆ ಮೂಲಕ ತರಲಾಯಿತು. ಫೆಬ್ರವರಿ 11ರ ವರೆಗೆ ಊರು ಮತ್ತು ಪರವೂರಿನ ಭಕ್ತರು ಆಗಮಿಸಲಿದ್ದರು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಶಾಸಕ ಅಂಗಾರ, ಅಧ್ಯಕ್ಷ ಎಸ್.ಎನ್ ಮನ್ಮಥ, ಪ್ರಧಾನ ಕಾರ್ಯದರ್ಶಿ ಮಾದವ ಭಟ್ ಶೃಂಗೇರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆ, ವೈದಿಕ ಮುಖ್ಯಸ್ಥರಾದ ರಾಜರಾಮ್ ಉದ್ದಂಪಾಡಿ ಹಾಗೂ ಇತರ ಇತರ ಪದಾಧಿಕಾರಿಗಳ ನೇತೃತ್ವದಲ್ಲಿ, ಉಪಸಮಿತಿಗಳ ಸಹಾಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ವಸ ವಿವಿಧ ಧಾರ್ಮಿಕ, ವೈದಿಕ,ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಆರಂಭಗೊಂಡಿದ್ದು ಭಕ್ತಸಾಗಾರವೇ ಪಂಚಂಲಿಂಗ ಕ್ಷೇತ್ರಕ್ಕೆ ಹರಿದು ಬರುತ್ತಿದೆ.

Related posts

Leave a Reply