Header Ads
Header Ads
Breaking News

ಐವರ್ನಾಡು ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ

ತನ್ನ ಜಾತಿಯನ್ನು ಗುರುತಿಸಿಕೊಳ್ಳದೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಎಲ್ಲಾರ ಸಹಕಾರ ದೊರೆಯುತ್ತದೆ. ರಾಜಕೀಯೇತರವಾಗಿ ಜಾತಿ, ಧರ್ಮ ಭೇದ ಭಾವವಿಲ್ಲದೆ ಎಲ್ಲರನ್ನೂ ಸಮಾನಾಗಿ ನೋಡಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ ಕಾರಣ ಸಹಕಾರಿ ಬ್ಯಾಂಕ್‌ಗಳು ಇಂದು ಎತ್ತರಕ್ಕೆ ಬೆಳೆದು ನಿಂತಿವೆ. ಎಲ್ಲರ ಬೆಂಬಲದಿಂದಾಗಿ ಸಹಕಾರ ಕ್ಷೇತ್ರದಲ್ಲಿ ಸುದೀರ್ಘವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು.ಸುಳ್ಯ ತಾಲೂಕಿನ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಮಾತನಾಡಿ, ಸಾಮಾನ್ಯ ವ್ಯಕ್ತಿಯೂ ಆರ್ಥಿಕ ಸಬಲೀಕರಣವನ್ನು ಸಾಧಿಸಲು ಕಾರಣವಾದ ಸಹಕಾರಿ ಕ್ಷೇತ್ರ ರೈತರನ್ನು ಬದುಕಿಸಿದೆ ಎಂದು ಹೇಳೀದರು. ಪ್ರಯೋಗಶೀಲತೆಗೆ ಬೆನ್ನೆಲುಬಾಗಿ ನಿಂತಿರುವ ಸಹಕಾರಿ ಕ್ಷೇತ್ರವು ಆಡಳಿತ ಜಾಣ್ಮೆ ಮತ್ತು ಆರ್ಥಿಕ ನಿರ್ವಹಣೆಯನ್ನು ಕಲಿಸಿಕೊಡುತ್ತದೆ. ಸಾಮಾನ್ಯ ರೈತರಿಂದಲೇ ಸಹಕಾರಿ ಕ್ಷೇತ್ರ ಯಶಸ್ವಿಯಲು ಕಾರಣವಾಗಿದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಅಂಗಾರ ಅವರು, ಮಾತನಾಡಿ ಹಿರಿಯರ ತ್ಯಾಗ ಮತ್ತು ಪರಿಶ್ರಮದಿಂದಾಗಿ ಸಹಕಾರಿ ಕ್ಷೇತ್ರ ಸುದೃಢವಾಗಿ ಬೆಳೆದಿದೆ. ನಮ್ಮ ಹಿರಿಯರು ಕಟ್ಟಿ ಬಳೆಸಿದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪ್ರತಿಯೊಬ್ಬರೂ ಕೊಡುಗೆ ನೀಡುವುದು ಎಲ್ಲಾರ ಹೊಣೆ.ಸಹಕಾರಿ ಸಂಘಗಳು ರೈತರಿಗೆ ಉತ್ತಮ ಸೇವೆ ನೀಡುತ್ತಿರುವುದರಿಂದ ಸಂಘ ಅಭಿವೃದ್ದಿ ಹೊಂದಲು ಸಹಕಾರಿಯಾಗಿದೆ ಎಂದು ಹೇಳಿದರು.ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಮಾಜಿ ಸಿಬ್ಬಂದಿಗಳು, ನಿವೃತ್ತ ಸೈನಿಕರು ಹಾಗು ಸಮಗ್ರ ಕೃಷಿಕರನ್ನು ಮತ್ತು ಪ್ರತಿಭಾವಂತರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಡಿ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷರಾಗಿ25 ವರ್ಷ ಪೂರೈಸಿದ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್.ಸಿ.ಕೆ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಕೆ.ಎಸ್.ದೇವರಾಜ್, ಶಶಿಕುಮಾರ್ ರೈ ಬೊಲ್ಯೊಟ್ಟು, ಸುಳ್ಯ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ,ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾವತಿ ಬಾಳಿಲ, ಹರೀಶ್ ಕಂಜಿಪಿಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಖ್ಯ ಅತಿಥಿಗಳಾಗಿದ್ದರು. ಐವರ್ನಾಡು ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾದ ಚಂದ್ರ ಕೋಲ್ಚಾರ್, ಡಾ.ಬಾಲಸುಬ್ರಹ್ಮಣ್ಯ ಪಾಲೆಪ್ಪಾಡಿ, ಪದ್ಮನಾಭ ಗೌಡ, ಬ್ಯಾಂಕ್‌ನ ಉಪಾಧ್ಯಕ್ಷ ಕೆ.ವಿಕ್ರಂ ಪೈ, ನಿರ್ದೇಶಕರಾದ ಎ.ಕೆ.ಸತೀಶ, ಎಂ.ಸಿ.ಕುಸುಮಾಧರ, ರವಿನಾಥ ಎಂ.ಎಸ್, ಕಿಶನ್‌ಕುಮಾರ್ ಜೆ,ಪುರಂದರ ಎಸ್, ಬಿ.ರೇವತಿ, ದೇವಕಿ.ಸಿ.ಜಿ, ಅನಂತಕುಮಾರ್.ಕೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮೇಲ್ವಿಚಾರಕ ಬಾಲಕೃಷ್ಣ.ಪಿ, ಐವರ್ನಾಡು ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್.ಸಿ.ಕೆ, ಕೆ.ಟಿ.ವಿಶ್ವನಾಥ ಉಪಸ್ಥಿತರಿದ್ದರು.

 

Related posts

Leave a Reply