Header Ads
Header Ads
Header Ads
Breaking News

ಐ‌ಆರ್‌ಸಿ ಕಾಂಕ್ರಿಟ್ ಮಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಉದ್ಘಾಟನೆ ಬೈಕಂಪಾಡಿ ಶಾಖೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಲೋಕಾರ್ಪಣೆ

ಜನರಿಗೆ ಉತ್ತಮ ಗುಣ ಮಟ್ಟದ ಕಟ್ಟಡ ನಿರ್ಮಾಣಕ್ಕೆ ಭಾರತದ ಹೆಸರಾಂತ ಐ‌ಆರ್‌ಸಿ ಕಾಂಕ್ರಿಟ್ ಮಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಬೈಕಂಪಾಡಿ ಶಾಖೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಉದ್ಘಾಟನೆಗೊಂಡಿತು.

ಭಾರತದ ಹೆಸರಾಂತ ಐ‌ಆರ್‌ಸಿ ಕಾಂಕ್ರಿಟ್ ಮಿಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನ ಬೈಕಂಪಾಡಿಯ ಶಾಖೆಯ ಉದ್ಘಾಟನೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇಂದು ನಡೆಯಿತು. ಶಾಸಕ ಮೊಯಿದ್ದೀನ್ ಬಾವಾ ಹಾಗೂ ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಜಂಟಿಯಾಗಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕ ಮೊಯಿದ್ದೀನ್ ಬಾವಾ, ಭಾರತ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಈ ಭಾಗದ ಜನರಿಗೆ ತೋರಿಸುವ ಕೆಲಸವನ್ನು ಕಂಪನಿಯು ಮಾಡಿದೆ ಎಂದು ಅವ್ರು ಹೇಳಿದ್ರು.

ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಮಾತನಾಡಿ, ಮಾಲಿನ್ಯ ನಿಯಂತ್ರಣಕ್ಕೆ ಇದು ಸಹಕಾರಿಯಾಗಲಿದೆ. ಉತ್ತಮ ಗುಣ ಮಟ್ಟದ ಕಟ್ಟಡ ನಿರ್ಮಾಣಕ್ಕೆ ಕಾಂಕ್ರಿಟ್ ಮಿಕ್ಸ್ ಅಗತ್ಯವಿದೆ ಎಂದು ಅವ್ರು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಸುಧೀರ್ ವಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಕಾರ್ಪೋರೇಟರ್‌ಗಳಾದ ಪುರುಷೋತ್ತಮ ಚಿತ್ರಾಪುರ, ಶಶಿಧರ್ ಹೆಗ್ಡೆ, ದೀಪಕ್ ಪೂಜಾರಿ, ಮ್ಯಾನೇಜಿಂಗ್ ಡೈರೆಕ್ಟರ್ ಡೆನ್ಸಿಲ್ ಎನ್. ಫೆರ್ನಾಡಿಂಸ್, ಸಂಸ್ಥೆಯ ನಿರ್ದೇಶಕ ಲೀಜಿಯ ಫೆರ್ನಾಂಡಿಸ್, ಡೆನೊರ ಫೆರ್ನಾಂಡಿಸ್, ಲೋಹಿತ್ ಬಜಾಲ್, ಸಂತೋಷ್ ನಾಯಕ್, ನಿತಿನ್ ಕುಮಾರ್ ಶ್ರವಣ್ ಕುಂದರ್ ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply