Header Ads
Header Ads
Breaking News

ಒಂದು ಕೈಗಾರಿಕೆಗೆ ಒಂದಕ್ಕಿಂತ ಹೆಚ್ಚಿನ ಸಂಘಟನೆ ಬೇಡ. ಒಂದೇ ಸಂಘಕ್ಕೆ ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ ಆಗ್ರಹ. ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಹೇಳಿಕೆ.

ಒಂದು ಕೈಗಾರಿಕೆಗೆ ಒಂದು ಸಂಘ ಸ್ಥಾಪಿಸಿ. ಅದಕ್ಕೆ ಮಾತ್ರ ಮಾನ್ಯತೆ ನೀಡಬೇಕು. ಒಪ್ಪಂದ, ಬೇಡಿಕೆ ಮಂಡನೆ ವೇಳೆ ಮಾನ್ಯತೆ ಪಡೆದ ಸಂಘದ ಪದಾಧಿಕಾರಿಗಳು ಮಾತ್ರ ಪಾಲ್ಗೊಳ್ಳಬೇಕು. ಇದರಿಂದ ಕಾರ್ಮಿಕರ ಬೇಡಿಕೆಗಳಿಗೆ, ಹಕ್ಕುಗಳಿಗೆ ನ್ಯಾಯ ಸಿಗಲು ಸಾಧ್ಯ ಎಂದು ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ ಹೇಳಿದರು.ಅವರು ಸುಳ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾರ್ಮಿಕ ಸಂಘಗಳ ಕಾಯ್ದೆ ಪ್ರಕಾರ ನೋಂದಣಿ ಮಾಡಿರದ ಹಾಗೂ ಕೆಲವೇ ಕಾರ್ಮಿಕರ ಪ್ರತಿನಿಧಿಯಂತಿರುವ ಸಂಘಟನೆಗಳಿಂದ ಎಲ್ಲ ಕಾರ್ಮಿಕರ ಹಿತಾಶಕ್ತಿ ಕಾಪಾಡಲು ಸಾಧ್ಯವಿಲ್ಲ. ಅರಣ್ಯ ಅಭಿವೃದ್ಧಿ ನಿಗಮದ ಅಡಿಯಲ್ಲಿ ದುಡಿಯುತ್ತಿರುವ ಎಲ್ಲ ಕಾರ್ಮಿಕರನ್ನು ಪ್ರತಿನಿಧಿಸುವ ಒಂದು ಸಂಘ ಇದ್ದರೆ ನಿಗಮದ ಆಡಳಿತ ವರ್ಗ ದ ಜನತೆಗೆ ಕಾರ್ಮಿಕರ ವೇತನ, ಇತರ ಸೌಲಭ್ಯಗಳ ಬಗ್ಗೆ ನ್ಯಾಯಸಮ್ಮತ ಬೇಡಿಕೆ ಮಂಡಿಸಲು ಸಾಧ್ಯವಾಗುತ್ತದೆ. ಈಗಾಲೇ 1400ಕಾರ್ಮಿಕರು ದುಡಿಯುತ್ತಿದ್ದು ಅವರಿಗೆ 20ಕೋಟಿ ರೂ ವೇತನಕ್ಕಾಗಿ ಖರ್ಚಾದರೆ, 300 ಅರಣ್ಯ ನಿಗಮದ ಅಧಿಕಾರಿಗಳಿಗೆ 17ಕೋಟಿ ರೂ ವೇತನಕ್ಕಾಗಿ ಖರ್ಚಾಗುತ್ತದೆ. ಈ ರೀತಿ ದುಡಿಯುವ ಕಾರ್ಮಿಕರಿಗೆ ಕಡಿಮೆ ವೇತನಗಳನ್ನು ನೀಡಲಾಗುತ್ತದೆ. ಅರಣ್ಯ ಅಭಿವೃದ್ಧಿ ನಿಗಮದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ.ಪ್ರಮಾಣಿಕವಾಗಿ ದುಡಿಯುವ ಕಾರ್ಮಿಕರಿಗೆ ಬೆಲೆ ಇಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಾಂತಮುತ್ತು ನಾಗಪಟ್ಟಣ, ಮುರಳೀಧರನ್, ಪ್ರವೀಣಕುಮಾರ್.ಕೆ, ಲೋಕನಾಥನ್ ಹಾಜರಿದ್ದರು.

Related posts

Leave a Reply