Header Ads
Breaking News

ಒಂದು ರಸ್ತೆ ಕೊಡಿ ಅಂತ ಕೇಳಿದ್ರೆ ಮಿನಿಸ್ಟರ್‌ಗೆ 10% ಕೊಡ್ಬೇಕು ಅಂತಾರೆ: ಶಾಸಕ ಭರತ್ ಶೆಟ್ಟಿ ಆರೋಪ!

ಲೋಕಸಭೆ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಹಾಶಕ್ತಿ ಕೇಂದ್ರ ಸುರತ್ಕಲ್ ನಗರ-1 ರ ಚುನಾವಣಾ ಪ್ರಚಾರ ಸಭೆಯು ಕೇಂದ್ರ ಮೈದಾನ ಕೃಷ್ಣಾಪುರದಲ್ಲಿ ನಡೆಯಿತು. ಈ ಸಂದರ್ಭ ಶಾಸಕರಾದ ಡಾ ವೈ ಭರತ್ ಶೆಟ್ಟಿ ಮಾತನಾಡಿ,  ಕೃಷ್ಣಾಪುರಕ್ಕೆ ಒಂದು ರಸ್ತೆ ಕಲ್ಪಿಸಿಕೊಡಿ ಅಂತ ಹೇಳಿದ್ರೆ ಮಿನಿಸ್ಟರ್‍ಗೆ 10% ಕೊಡ್ಬೇಕು ಎಂದು ಹೇಳ್ತಾರೆ. ಇನ್ನು ಕರಾವಳಿ ಜನರಿಗೆ ತಿಳುವಳಿಕೆ ಇಲ್ಲ ಎಂಬ ಮುಖ್ಯಮಂತ್ರ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಇನ್ನು ಚಿತ್ರ ನಟಿ ಹಾಗೂ ಬಿಜೆಪಿ ಮುಖಂಡೆಯಾಗಿರುವ ತಾರಾ ಅವರು ಮಾತನಾಡಿ ಹಿಂದೆ ಭಾರತೀಯರು ವಿದೇಶಕ್ಕೆ ಹೋಗ್ಬೇಕು ಅಂದ್ರೆ ವೀಸಾ ಸಿಕ್ಕೋದು ತುಂಬಾ ಕಷ್ಟ ಆಗ್ತಾ ಇತ್ತು. ಇವತ್ತು ಯಾವುದೇ ದೇಶಕ್ಕೆ ವೀಸಾ ಕೇಳಿದ್ರೂ ಬನ್ನಿ ನಮ್ಮ ದೇಶಕ್ಕೆ ಎಂದು ಕರೆಯುವಂತಹ ಕಾಲವನ್ನ ಸೃಷ್ಠಿ ಮಾಡಿದವರು ನರೇಂದ್ರ ಮೋದಿಯವರು ಎಂದು ಹೇಳಿದ್ರು. ಈ ಸಂದರ್ಭ ಹಲವಾರು ಬಿಜೆಪಿ ಮುಖಂಡರು ಹಾಜರಿದ್ರು. 

Related posts

Leave a Reply

Your email address will not be published. Required fields are marked *