Header Ads
Header Ads
Breaking News

ಒಂದು ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತದೆ 2019 ರ ಒಳಗೆ ರಾಮ ಮಂದಿರ ಆಗೋದು ನಿಶ್ಚಿತ ಧರ್ಮ ಸಂಸದ್‌ನಲ್ಲಿ ಪೇಜಾವರ ಶ್ರೀ ಹೇಳಿಕೆ

ಒಂದು ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತದೆ. 2019 ರ ಒಳಗೆ ರಾಮ ಮಂದಿರ ಆಗೂದು ನಿಶ್ಚಿತ. ಭಾರತದಲ್ಲಿ ಈಗ ವಾತಾವರಣ ಚೆನ್ನಾಗಿದೆ. ಇದಕ್ಕೆ ಕೃಷ್ಣನ ಅನುಗ್ರಹ ಇದೆ ಅಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು. ಧರ್ಮ ಸಂಸದ್ ನಲ್ಲಿ ಭಾಗವಹಿಸಿ ಮಾತನಾಡಿದರು. ಉಡುಪಿಯಲ್ಲಿ ಕ್ಷೀರ ಮಂಥನವಾಗುತ್ತಿದೆ. ಇದು ಧರ್ಮಸಂಸದ್ ಮಾತ್ರ ಅಲ್ಲ.

ಇದು ಕ್ಷೀರ ಸಮುದ್ರದ ಮಂಥನ. ಅಸ್ಪೃಷ್ಯತೆ ಎಂಬುದು ಕಾಲಕೂಟ ವಿಷ ಸರ್ಪ. ಅದರ ಉಚ್ಛಾಟನೆ ಮೊದಲು ಹಿಂದೂಗಳಲ್ಲಿ ಆಗಬೇಕಿದೆ. ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ಒಂದು ನಿಯಮ. ಬಹುಸಂಖ್ಯಾತರಿಗೆ ಬೇರೆಯೇ ಕಾನೂನು. ಜಾತ್ಯಾತೀತ ರಾಷ್ಟ್ರ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಪೇಜಾವರ ಶ್ರೀಗಳು ಸಮಾಜವನ್ನು ಒಡೆಯುವುದು ಜಾತ್ಯಾತೀತ ಪಕ್ಷಗಳು.ಭಾರತದ ಸಂವಿಧಾನ ಬದಲಾಗಬೇಕು. ಕೇಂದ್ರ ಸರಕಾರ ಈ ಕಾರ್ಯಕ್ಕೆ ಮುಂದಾಗಲಿ ಎಂದು ಪೇಜಾವರಶ್ರೀ ಸಲಹೆ ನೀಡಿದರು. ಗೋ ಹತ್ಯೆ ನಿರ್ಬಂಧ ಜಾರಿಯಾಗಬೇಕು.ರಾಜ್ಯಗಳಲ್ಲಿ ಗೋ ಹತ್ಯೆ ಜಾರಿಗೆ ತರುವ ಸರ್ಕಾರ ಬರಬೇಕು ಎಂದರು.

Related posts