Header Ads
Header Ads
Header Ads
Breaking News

ಒಂದೇ ಬಾರಿ ಅರಳಿದ ೧೦ ಬ್ರಹ್ಮ ಕಮಲಗಳು ಇಡೀ ಪ್ರದೇಶವನ್ನೇ ಪರಿಮಳಯುಕ್ತವನ್ನಾಗಿಸಿದ ಹೂ ಭಟ್ಕಳದ ಕೋಗ್ತಿನಗರದಲ್ಲಿ ಅರಳಿದ ಬ್ರಹ್ಮ ಕಮಲ

 

 ಭಟ್ಕಳ ಮಲ್ಲಿಗೆಯ ಪರಿಮಳಕ್ಕೆ ಹೆಸರಾಗಿದ್ದ ಭಟ್ಕಳ ಇಂದು ಬ್ರಹ್ಮಕಮಲದ ಸುವಾಸನೆಗೂ ಹೆಸರುವಾಸಿಯಾಗಿದೆ. ತಾಲೂಕಿನ ಕೋಗ್ತಿನಗರದ ಬಂದರ ರೋಡ್ ೨ನೇ ಕ್ರಾಸ್‌ನ ನಿವಾಸಿಯಾದ ಶಂಕರ್.ಡಿ. ನಾಯ್ಕ ಅವರ ಮನೆಯಲ್ಲಿ ೧೦ ಬ್ರಹ್ಮ ಕಮಲಗಳು ಒಂದೇ ಬಾರಿ ಅರಳಿ ಇಡೀ ಪ್ರದೇಶವನ್ನೇ ಪರಿಮಳಯುಕ್ತವನ್ನಾಗಿ ಮಾಡಿದ್ದು ಸುತ್ತಮುತ್ತಲಿನ ಜನರೂ ಕೂಡಾ ಪರಿಮಳವನ್ನು ಆಸ್ವಾದಿಸಿ ಸಂತಸ ಪಟ್ಟರು.
ಹೂ ಅರಳಿರುವ ಸುದ್ದಿ ಆ ಪ್ರದೇಶದವರಿಗೆ ಸುವಾಸನೆಯಿಂದ ತಿಳಿದರೆ, ಸುದ್ದಿ ತಿಳಿದ ಬೇರೆ ಬೇರೆ ಪ್ರದೇಶದ ಜನರು ಬಂದು ಹೂವು ಅರಳಿರುವ ಅಂದವನ್ನು ನೋಡಿದರು. ಬ್ರಹ್ಮ ಕಮಲ ಅರಳಿದನ್ನು ನೋಡಿದರೇನೇ ಜನರಿಗೆ ಅದೃಷ್ಟ ಒಲಿಯುತ್ತದೆ ಎನ್ನುವುದು ಕೂಡಾ ಜನರ ನಂಬಿಕೆಯಾಗಿದೆ.
ಶಂಕರ್.ಡಿ. ನಾಯ್ಕರವರ ಮನೆಯಲಿ ಅರಳಿದ ೧೦ ಬ್ರಹ್ಮ ಕಮಲ ಹೂವಿನ ಪೋಟೋವನ್ನು ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಂಡರೆ ಇನ್ನು ಕೆಲವರು
ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.

Related posts

Leave a Reply