Header Ads
Breaking News

ಒಂದೇ ವಾರದಲ್ಲಿ ಮೂರು ದೇವಾಲಯಗಳಲ್ಲಿ ಕೆಜಿಗಟ್ಟಲೆ ದೇವರ ಆಭರಣ ಕಳವು; ಶಾಸಕ ಸುಕುಮಾರ್ ಶೆಟ್ಟಿ ಆಕ್ರೋಶ

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಲಯಗಳಲ್ಲಿ ಸರಣಿ ಕಳವು ನಡೆದಿದೆ. ಒಂದೇ ವಾರದಲ್ಲಿ ಮೂರು ದೇವಾಲಯಗಳಲ್ಲಿ ಕಳವು ನಡೆದಿದ್ದು ಕೆಜಿಗಟ್ಟಲೆ ದೇವರ ಆಭರಣ ಕಳವುಗೈಯಲಾಗಿದೆ.
ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾವುಂದ ಸಮೀಪದ ಬಡಾಕೆರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ತಡರಾತ್ರಿ ಕನ್ನ ಹಾಕಿದ ಕಳ್ಳರು ದೇವಸ್ಥಾನದೊಳಗಿನ ಕೆ.ಜಿಗಟ್ಟಲೇ ಬೆಳ್ಳಿ ಆಭರಣ ಹಾಗೂ ಸಿಸಿ ಟಿವಿ ಡಿ.ವಿ.ಆರ್ ಹಾಗೂ ಎಲ್.ಇ.ಡಿ ಟಿವಿಯನ್ನು ಕಳವುಗೈದಿದ್ದಾರೆ. ಕಳವಾದ ವಸ್ತುಗಳ ಒಟ್ಟು ಮೌಲ್ಯ ಅಂದಾಜು ಹತ್ತು ಲಕ್ಷಕ್ಕೂ ಅಧಿಕ ಎನ್ನಲಾಗಿದೆ.

ಇನ್ನು ಆಲೂರು ಸಮೀಪದ ಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಲೂರು ಮಾರಿಗುಡಿಯಲ್ಲೂ ಬ್ಯಾಕ್ ಟು ಬ್ಯಾಕ್ ಕಳವು ನಡೆದಿದೆ. ಇನ್ನು ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಂದ ಜನರು ಕಂಗಾಲಾಗಿದ್ದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಪೊಲೀಸ್ ವ್ಯವಸ್ಥೆ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳವು ಪ್ರಕರಣದಲ್ಲಿ ಪೊಲೀಸರು ಹೀಗೆ ಅಸಡ್ಡೆ ಮಾಡಿದರೆ ಕೊಲ್ಲೂರಿಗೂ ನುಗ್ಗುತ್ತಾರೆ. ಐವತ್ತುಕೋಟಿಯ ಚಿನ್ನದ ರಥವನ್ನೂ ಹೊತ್ತೊಯ್ಯುತ್ತಾರೆ. ಪೊಲೀಸರು ಅಪರಾಧಿಗಳನ್ನು ಕೂಡಲೆ ಬಂಧಿಸದೇ ಇದ್ದರೆ ಉಪವಾಸ ಮಾಡುತ್ತೇನೆ. ಬೈಂದೂರಿನಲ್ಲೇ ಆರೇಳು ದೇಗುಲಗಳಲ್ಲಿ ಕಳ್ಳತನವಾಗಿದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಶಾಸಕರು ಪ್ರಶ್ನಿಸಿದ್ದಾರೆ.

Related posts

Leave a Reply

Your email address will not be published. Required fields are marked *