Header Ads
Header Ads
Header Ads
Breaking News

ಒಡಿಯೂರು ಕ್ಷೇತ್ರದಲ್ಲಿ ದತ್ತಜಯಂತಿ ಮಹೋತ್ಸವ ದತ್ತಮಾಲಾಧಾರಣಾ ಕಾರ್ಯಕ್ರಮಕ್ಕೆ ಚಾಲನೆ

ವಿಟ್ಲದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತಜಯಂತಿ ಮಹೋತ್ಸವದ ಅಂಗವಾಗಿ ಶ್ರೀ ದತ್ತಮಾಲಾಧಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಊರ-ಪರವೂರಿನ, ಹೊರರಾಜ್ಯಗಳ ಸುಮಾರು 162 ಮಂದಿ ಗುರುಭಕ್ತರು ಶ್ರೀ ದತ್ತಮಾಲಾಧಾರಣೆ ಮಾಡಿದರು. ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ವೇ.ಮೂ. ಚಂದ್ರಶೇಖರ ಉಪಧ್ಯಾಯರ ನೇತೃತ್ವದಲ್ಲಿ ಶ್ರೀ ದತ್ತ ಮಹಾಯಾಗವು ಆರಂಭಗೊಂಡಿತು.

ಈ ಸಂದರ್ಭ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಅಜ್ಞಾನದ ಅಂಧಕಾರವನ್ನು ನಿವಾರಣೆ ಮಾಡುವವ ಗುರುವಾಗಿದ್ದು, ಅವನ ಮಹತ್ವವನ್ನು ಅರಿತು ಸೇವೆ ಮಾಡಬೇಕು. ಸಂಸ್ಕಾರದ ವಿಚಾರವನ್ನು ಸಮಾಜದಲ್ಲಿ ತುಂಬುವ ಕಾರ್ಯ ನಡೆಯಬೇಕು ಎಂದು ಹೇಳಿದರು.

ಮುಂಬಯಿ ಉದ್ಯಮಿ ವಾಮಯ್ಯ ಬಿ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಟಿ. ತಾರಾನಾಥ ಕೊಟ್ಟಾರಿ , ಮಂಗಳೂರು ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply