Header Ads
Breaking News

ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ-ಗ್ರಾಮೋತ್ಸವ ವಿಜೃಂಭಣೆಯಿಂದ ನಡೆದ ಕಾರ್ಯಕ್ರಮ

ವಿಟ್ಲದ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀಗಳ ಜನ್ಮ ದಿನೋತ್ಸವ ಸಮಿತಿ ಮತ್ತು ಸಹಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಕ್ಷೇತ್ರದಲ್ಲಿ ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವ-ಗ್ರಾಮೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಗಣಪತಿ ಹವನ, ನಾಮ ಸಂಕೀರ್ತನೆ, ಪರಮಪೂಜ್ಯ ಶ್ರೀ ಗುರುಗಳಿಗೆ ಪೂರ್ಣಕುಂಭ ಸ್ವಾಗತ, ದೀಪ ಪ್ರಜ್ವಲನೆ, ಶ್ರೀ ಗುರು ಪಾದಪೂಜೆ – ಪಾದುಕಾರಾಧನೆ, ಗುರುಕುಲದ ಪುಟಾಣಿಗಳಿಂದ ಶ್ರೀಗಳಿಗೆ ಗುರುನಮನ, ದೇಸೀಘೃತದಿಂದ ತುಲಾಭಾರ ಸೇವೆ, ಉಯ್ಯಾಲೆ ಸೇವೆ ನಡೆಯಿತು.ಸಭಾ ಕಾರ್ಯಕ್ರಮದಲ್ಲಿ ಭಕ್ತರ ಗೌರವಾರ್ಪಣೆ ಸ್ವೀಕರಿಸಿ, ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಸಂಪತ್ತನ್ನು ಭೋಗಿಸಬೇಕು ಅಥವಾ ದಾನ ಮಾಡಬೇಕು. ಇದೆರಡೂ ಆಗದಿದ್ದಲ್ಲಿ ನಾಶವಾಗುತ್ತದೆ. ಪ್ರೀತಿಯ ಕೊಡುಗೆಯಿಂದ ಸಂಪತ್ತು ಸದ್ವಿನಿಯೋಗ ಮತ್ತು ಸಂಘಟನೆ ಸದೃಢವಾಗುತ್ತದೆ. ಗ್ರಾಮ ವಿಕಾಸ ಯೋಜನೆ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯವಿದೆ. ಅದು ಮಕ್ಕಳಿಂದಲೇ ಆರಂಭವಾಗಬೇಕಿದೆ. ಅದಕ್ಕಾಗಿ ಮನಸ್ಸು ಮತ್ತು ಸಮಾಜ ಸ್ವಚ್ಛವಾಗಬೇಕಾಗಿದೆ ಎಂದು ವ್ಯಾಖ್ಯಾನಿಸಿದರು. ಚಿತ್ರದುರ್ಗ ಮುರುಘಾಮಠದ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.ಸಾಧ್ವೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿದರು.ಆಂಗ್ಲ ಭಾಷೆಗೆ ಭಾಷಾಂತರಿಸಿದ ಗ್ರಾಮಾಭ್ಯುದಯ ಕೃತಿಯನ್ನು ಮತ್ತು ಪೂಜ್ಯ ಶ್ರೀಗಳವರ ಸಿರಿ ಕಂಠದಿಂದ ಮೂಡಿಬಂದ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿದ್ಯಾಭ್ಯಾಸಕ್ಕೆ ನೆರವು, ಔಷಧೀಯ ಸಸಿಗಳ ವಿತರಣೆ, ಸಂಘ ಸಂಸ್ಥೆಗೆ ನೆರವು, ಅನಾರೋಗ್ಯಕ್ಕೆ ನೆರವು, ಪ್ರಕೃತಿ ವಿಕೋಪಕ್ಕೆ ಸಹಾಯ ಹಸ್ತ, ಆದರ್ಶ ಘಟ ಸಮಿತಿಗಳ ಗುರುತಿಸುವಿಕೆ, ಆದರ್ಶ ಮಂಡಲ ಸಮಿತಿ ಗುರುತಿಸುವಿಕೆ ಮಾಡಲಾಯಿತು.ಗ್ರಾಮೋತ್ಸವ ಪ್ರಯುಕ್ತ ಸೇವಾ ಕಾರ್ಯಗಳಿಗೆ ಪ್ರತಿಭಾ ಪುರಸ್ಕಾರಕ್ಕೆ 19 ವಿದ್ಯಾರ್ಥಿಗಳಿಗೆ ೩೦,೫೦೦ ರೂ., ವಿದ್ಯಾಭ್ಯಾಸ ಮುಂದುವರಿಕೆಗೆ ನೆರವು 373ವಿದ್ಯಾರ್ಥಿಗಳಿಗೆ9,34,000 ರೂ., ವೈದ್ಯಕೀಯ ಶುಶ್ರೂಷೆಗೆ ಸಹಾಯ ಹಸ್ತ116 ಮಂದಿಗೆ 3,26,000ರೂ., ಸಂಘ -ಸಂಸ್ಥೆ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ನೆರವು 23 ಕೇಂದ್ರಗಳಿಗೆ3,93,000 ರೂ., ನವನಿಕೇತನ ಪ್ರಕೃತಿ ವಿಕೋಪ- ಶೌಚಾಲಯ ನಿರ್ಮಾಣಕ್ಕೆ ನೆರವು ೫೧ ಫಲಾನುಭವಿಗಳಿಗೆ5,27,000 ರೂ. ವಿತರಿಸಲಾಯಿತು.ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ಲೀಲಾಕ್ಷ ಕರ್ಕೇರ, ಪುಣೆ ಉದ್ಯಮಿ ರಂಜಿತ್ ಶೆಟ್ಟಿ ಪುಣೆ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪುಣೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು, ಮಹಾರಾಷ್ಟ್ರ ಬಳಗದ ಕೃಷ್ಣ ಎಲ್.ಶೆಟ್ಟಿ, ವಾಮಯ್ಯ ಶೆಟ್ಟಿ ಮುಂಬಯಿ, ರೇವತಿ ವಾಮಯ್ಯ ಶೆಟ್ಟಿ ಮುಂಬಯಿ, ಒಡಿಯೂರು ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ರೈ ಅಂಕತ್ತಡ್ಕ, ಒಡಿಯೂರು ಗುರುದೇವ ಸೇವಾ ಬಳಗದ ಮಂಗಳೂರು ಅಧ್ಯಕ್ಷ ಜಯಂತ್ ಜೆ.ಕೋಟ್ಯಾನ್, ಪ್ರಕಾಶ್ ವಿ.ಶೆಟ್ಟಿ ಪೇಟೆಮನೆ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ ಕಾಪಿಕ್ಕಾಡ್, ಉದ್ಯಮಿ ಬಾಲಚಂದ್ರ ಬೆಂಗಳೂರು, ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀಗಳ ಮಾತೃಶ್ರೀ ಅಂತಕ್ಕೆ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ತುಳು ಕೂಟದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್, ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ದಾವಣಗೆರೆಯ ಸಿದ್ಧರಾಮಪ್ಪ, ನೀಲಕಂಠಪ್ಪ, ಉಡುಪಿಯ ಪ್ರಭಾಕರ ಶೆಟ್ಟಿ, ಅಜಿತ್‌ನಾಥ ಪಂಗಳಂ, ಪ್ರ.ಕಾರ್ಯದರ್ಶಿ ಸದಾಶಿವ ಅಳಿಕೆ, ವಿಟ್ಲ ಮಂಡಲ ಅಧ್ಯಕ್ಷ ಸದಾಶಿವ ಶೆಟ್ಟಿ ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply