Breaking News

ಒಬಾಮಾರ ಬದುಕಲ್ಲಿ ಬಂದ ಮೊದಲ ಮಹಿಳೆ, ಶಿಲಾ ಮಿಯೋಶಿ ಜಗೆರ್ ಜೀವನ ಚರಿತ್ರೆಯಲ್ಲಿ ಪ್ರಸ್ತಾಪ

ಮಿಷೆಲ್ ತಮ್ಮ ಬಾಳಸಂಗಾತಿ ಆಗುವುದಕ್ಕೂ ಮುನ್ನ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಇನ್ನೊಬ್ಬ ಮಹಿಳೆಯೊಂದಿಗೆ ಗಾಢ ಸಂಬಂಧ ಹೊಂದಿದ್ದರು.

ಸದ್ಯದಲ್ಲೇ ಬಿಡುಗಡೆಯಾಗಲಿರುವ ಒಬಾಮ ಅವರ ಜೀವನ ಚರಿತ್ರೆ ‘ರೈಸಿಂಗ್ ಸ್ಟಾರ್ ದಿ ಮೇಕಿಂಗ್ ಆಫ್ ಬರಾಕ್ ಒಬಾಮ’ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಶಿಲಾ ಮಿಯೊಷಿ ಜಗೆರ್ ಎಂಬುವರನ್ನು ಪ್ರೀತಿಸಿದ್ದ ಒಬಾಮ, ಅವರೊಂದಿಗೆ ಷಿಕಾಗೊದಲ್ಲಿ ವಾಸವಿದ್ದರು ಎಂದು ಕೃತಿಯ ಕುರಿತು ದಿ ವಾಷಿಂಗ್ಟನ್ ಪೋಸ್ಟ್ನಲ್ಲಿನ ವಿಮರ್ಶೆ ಹೇಳಿದೆ.
ಒಬಾಮ ರಾಜಕೀಯದಲ್ಲಿ ಮುಂದುವರಿದಂತೆ, ಅವರ ಮೈಬಣ್ಣ ನಮ್ಮ ಸಂಬಂಧದ ಮೇಲೆ ಪರಿಣಾಮ ಬೀರಿತು ಎಂದು ಜಗೆರ್, ಕೃತಿಯ ಲೇಖಕ ಡೇವಿಡ್ ಗ್ಯಾರೊ ಅವರಿಗೆ ತಿಳಿಸಿದ್ದಾರೆ.

Related posts

Leave a Reply