Header Ads
Header Ads
Breaking News

ಒಲಂಪಿಕ್ ಸ್ಪೋರ್ಟ್ಸ್‌ನ ನೂತನ ಶಾಖೆಯ ಉದ್ಘಾಟನೆ: ಪೋರಂ ಫಿಜ್ಜಾ ಮಾಲ್‌ನಲ್ಲಿ ಶುಭಾರಂಭ.

ಮಂಗಳೂರಿನ ಕ್ರೀಡಾ ಪ್ರೇಮಿಗಳಿಗೆ ಇಲ್ಲೊಂದು ಸಿಹಿಸುದ್ದಿ. ಒಲಂಪಿಕ್ ಸ್ಪೋರ್ಟ್ಸ್ ಮಂಗಳೂರಿನ ಪೋರಂ ಫಿಜ್ಜಾ ಮಾಲ್‌ಲ್ಲಿ ತನ್ನ ನೂತನ ಶಾಖೆಯನ್ನು ಶುಭಾರಂಭಗೊಳಿದೆ.
ಹೌದು ಈಗಾಗಲೇ ಕ್ರೀಡಾ ಪ್ರೇಮಿಗಳಿಗೆ ತನ್ನ ನಗು ಮೊಗದ ಸೇವೆಯನ್ನು ನೀಡುತ್ತಾ ಬಂದಿರುವ ಒಲಂಪಿಕ್ ಸ್ಪೋರ್ಟ್ಸ್‌ನ ನೂತನ ಮಳಿಗೆಯು ಇಂದು ನಗರದ ಪೋರಂ ಫಿಜ್ಜಾ ಮಾಲ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಶುಭಾರಂಭಗೊಳಿಸಿತು.


ಮಿಸ್ಟರ್ ಇಂಡಿಯಾ ಮೆನ್ಸ್ ಫಿಸಿಕ್ 2018-19 ಪ್ರಶಸ್ತಿ ವಿಜೇತ ಮೊಹಮ್ಮದ್ ರಮೀಝ್‌ರವರು ರಿಬ್ಬನ್ ಕತ್ತರಿಸುವ ಮೂಲಕ ಒಲಂಪಿಕ್ ಸ್ಪೋರ್ಟ್ಸ್‌ನ ನೂತನ ಮಳಿಗೆಯನ್ನುನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತಮಗುಣ ಮಟ್ಟದ ಫ್ಯಾಬ್ರಿಕ್ಸ್‌ಗಳು ಇಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದು, ಮಂಗಳೂರಿನ ಜನತೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ನೂತನ ಮಳಿಗೆಯ ಯಶಸ್ಸಿಗೆ ಶುಭಹಾರೈಸಿದರು.


ಒಲಂಪಿಕ್ ಸ್ಪೋಟ್ಸ್‌ನ ಮಾಲಕ ಸಮೀರ್ ಮಾತನಾಡಿ, ಕ್ರೀಡಾಪಟುಗಳಿಗೆ ಕಡಿಮೆ ಬೆಲೆಯಲ್ಲಿ ಉನ್ನತ ಮಟ್ಟದ ಫ್ಯಾಬ್ರಿಕ್‌ಗಳು ದೊರೆಯಬೇಕು ಎಂಬ ಉದ್ದೇಶದೊಂದಿಗೆ ನಾವು ಈ ಮಳಿಗೆಯನ್ನು ಪ್ರಾರಂಭಿಸಿದ್ದೇವೆ. ಎಲ್ಲ ವರ್ಗದವರಿಗೂ ಕೈಗೆಟಕುವ ದರದಲ್ಲಿ ಕ್ರೀಡಾ ಸಾಮಾಗ್ರಿಗಳು ಇಲ್ಲಿ ಲಭ್ಯವಿರುತ್ತದೆ ಎಂದರು.
ಈಗಾಗಲೇ ಮಂಗಳೂರು ಮಾತ್ರವಲ್ಲದೇ ಉಡುಪಿ, ಕುಂದಾಪುರಗಳಲ್ಲಿ ಶಾಖೆಯನ್ನು ಹೊಂದಿರುವ ಒಲಂಪಿಕ್ ಸ್ಪೋರ್ಟ್ಸ್‌ನಲ್ಲಿ ಕ್ರೀಡೆಗೆ ಬೇಕಾಗುವ ಕ್ರೀಡಾ ಸಾಮಾಗ್ರಿಗಳು, ಸಲಕರಣೆಗಳು, ಜೆರ್ಸಿ ಯೂನಿಪಾರ್ಮ್‌ಗಳು ಹಾಗೂ ಇನ್ನಿತರ ಕ್ರೀಡಾ ಪರಿಕರಗಳು ಇಲ್ಲಿ ಲಭ್ಯವಿರುತ್ತದೆ

Related posts

Leave a Reply