Header Ads
Breaking News

ಓಂ ಶಾಂತಿ ಓಂ ಚಲನಚಿತ್ರ : ಮಾರ್ಚ್ ಮೊದಲವಾರದಲ್ಲಿ ಮಂಗಳೂರಿನಲ್ಲಿ ಬಿಡುಗಡೆ

ಜೈ ಭುವನೇಶ್ವರಿ ಪ್ರೊಡಕ್ಷನ್ಸರವರ ಬ್ಯಾನರ್ ಅಡಿಯಲ್ಲಿ ಎಂ. ಪಾಂಡು ಅವರು ಪ್ರಥಮ ಬಾರಿಗೆ ನಿರ್ಮಿಸಿದ ಓಂ ಶಾಂತಿ ಓಂ ಚಲನಚಿತ್ರವನ್ನು ಮಂಗಳೂರು ಮತ್ತು ಉಡುಪಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಸುದ್ದಿಗೋಷ್ಟಿಯಲ್ಲಿ ಚಿತ್ರದ ನಿರ್ದೇಶಕ ಅಚಲ್ ಎಸ್. ಪ್ರಮೋದ್ ತಿಳಿಸಿದರು.ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಓಂ ಶಾಂತಿ ಓಂ ಒಂದು ಆತ್ಮದ ಕಥೆಯಾಗಿದೆ. ಇದರ ಸಂಭಾಷಣೆಯನ್ನು ಹೇಮಂತ್ ಕುಮಾರ್ ಅವರು ಬರೆದಿದ್ದಾರೆ. ರೇಖಾ ಪಂಡಿತ್ ಪ್ರಥಮ ಬಾರಿಗೆ ನಾಯಕಿಯಾಗಿ ನಟಿಸಿದ್ದರೆ, ಪಿ. ಶರತ್ ಕುಮಾರ್ ಮೊದಲ ಬಾರಿಗೆ ನಟಿಸಿದ್ದಾರೆ. ಇದೊಂದು ಆತ್ಮದ ಸುತ್ತ ನಡೆಯುವ ತ್ರಿಕೋನ ಪ್ರೇಮ ಕಥೆಯಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಚಿತ್ರದ ನಿರ್ಮಾಪಕರಾದ ಎಂ. ಪಾಂಡು, ಹೇಮಂತ್ ಕುಮಾರ್, ರೇಖಾ ಪಂಡಿತ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *