Breaking News

ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಎಂಟರ ಘಟ್ಟ ಪ್ರವೇಶಿಸಿದ ಪ್ರಣೀತ್

ಭಾರತದ ಬಿ. ಸಾಯಿ ಪ್ರಣೀತ್ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪ್ರಣೀತ್ 21-13,21-18ರಲ್ಲಿ ನೇರ ಗೇಮ್‌ಗಳಿಂದ ಮಲೇಷ್ಯಾದ ಇಸ್ಕಂದರ್ ಜುಲ್ಕರ್ಣಿಯನ್ ಅವರನ್ನು ಮಣಿಸಿದರು.
ಸಿಂಗಪುರ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಮೂರನೇ ಶ್ರೇಯಾಂಕದ ಪ್ರಣೀತ್ ಕ್ವಾರ್ಟರ್‌ನಲ್ಲಿ ಥಾಯ್ಲೆಂಡ್‌ನ ಕಂಟಫನ್ ವಾಂಗ್‌ಚರಣ್ ವಿರುದ್ಧ ಆಡಲಿದ್ದಾರೆ. ಜುಲ್ಕರ್ಣಿಯನ್ ಅವರನ್ನು ಎದುರಿಸಿದ ಮೊದಲ ಪಂದ್ಯದಲ್ಲೇ ಪ್ರಣೀತ್ ಗೆಲುವು ಒಲಿಸಿಕೊಂಡಿದ್ದಾರೆ. ಮೊದಲ ಗೇಮ್‌ನಲ್ಲಿ ಆರಂಭದಲ್ಲೇ ೫-೧ರ ಮುನ್ನಡೆ ಪಡೆದರು.ಆದರೆ ಮಲೇಷ್ಯಾದ ಅನುಭವಿ ಆಟಗಾರ ಭಾರತದ ಯುವ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಿದರು. ಆದರೆ ಪ್ರಣೀತ್ ದೀರ್ಘ ರ‍್ಯಾಲಿಗಳಲ್ಲಿ ಹೆಚ್ಚು ಪಾಯಿಂಟ್ಸ್ ಪಡೆದು ತಿರುಗೇಟು ನೀಡಿದರು. ಎರಡನೇ ಗೇಮ್‌ನಲ್ಲಿ ಜುಲ್ಕರ್ಣಿಯನ್ ೯-೭ರಲ್ಲಿ ಮುನ್ನಡೆ ಸಾಧಿಸಿದರು. ಆದರೆ ಪ್ರಣೀತ್ ಚುರುಕಿನ ರಿಟರ್ನ್ಸ್‌ಗಳಿಂದ ಪಾಯಿಂಟ್ಸ್ ಪಡೆದರು.
41ನಿಮಿಷದ ಹಣಾಹಣಿಯಲ್ಲಿ ಪ್ರಣೀತ್ ತಮ್ಮ ಅಮೋಘ ಸಾಮರ್ಥ್ಯದ ಆಟದ ಮೂಲಕ ಗೆಲುವು ತಮ್ಮದಾಗಿಸಿಕೊಂಡರು.

Related posts

Leave a Reply