Header Ads
Header Ads
Breaking News

ಓಮ್ನಿ ಕಾರು ಮತ್ತು ಪಿಕ್‌ಅಪ್ ವಾಹನ ನಡುವೆ ಭೀಕರ ಅಪಘಾತ:ಓರ್ವ ಸಾವು, ಇನ್ನೋರ್ವನ ಸ್ಥಿತಿ ಗಂಭೀರ

ಪುತ್ತೂರಿನ ಮುಕ್ವೆಯಲ್ಲಿ ಒಮ್ನಿ ಕಾರು ಹಾಗೂ ಪಿಕ್ ಅಪ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಒಮ್ನಿ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿದ್ದ, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಒಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬಂದ ಒಮ್ನಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕೃಷ್ಣ ಭಟ್ ಸಾವನ್ನಪ್ಪಿದ್ದು, ಕೃಷ್ಣ ಭಟ್ ಮಗ ಅವಿನಾಶ್ ಭಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವಿನಾಶ್ ಭಟ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಎರಡು ವಾಹನಗಳ ನಡುವೆ ನಡೆದ ಅಫಘಾತದ ದೃಶ್ಯ ಸಿ.ಸಿ.ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಅಫಘಾತದ ಗಂಭೀರತೆಯನ್ನು ತಿಳಿಸುತ್ತದೆ.

Related posts

Leave a Reply