Header Ads
Header Ads
Header Ads
Breaking News

ಓಲಾ ಉಬರ್ ಕಾರುಗಳ ಕಾನೂನು ಬಾಹಿರ ಓಡಾಟ ಮಂಗಳೂರಿನಲ್ಲಿ ರಿಕ್ಷಾ ಚಾಲಕರ ಪ್ರತಿಭಟನೆ

ಓಲಾ ಉಬರ್ ಕಾರುಗಳ ಕಾನೂನು ಬಾಹಿರ ಓಡಾಟವನ್ನು ವಿರೊಧಿಸಿ ಮಂಗಳೂರಿನಲ್ಲಿಂದು ರಿಕ್ಷಾ ಚಾಲಕರಿಂದ ಬೃಹತ್ ಪ್ರತಿಭಟನೆ ನಡೆಯಿತು.ಮಂಗಳೂರು ನಗರ ಆಟೋ ಚಾಲಕ ಮಾಲಕರ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ರಿಕ್ಷಾ ಚಾಲಕರು ಭಾಗವಹಿಸಿದ್ದರು.ಪ್ರತಿಭಟನೆಗೂ ಮೊದಲು ಮಿನಿ ವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಮಂಗಳೂರಿನಲ್ಲಿ ಒಲಾ ಉಬರ್ ಕಾರುಗಳು ಕಾನೂನಿಗೆ ವಿರುದ್ಧವಾಗಿ ಓಡಾಟ ನಡೆಸುತ್ತಿದ್ದು, ಮುಂದೊಂದು ದಿನ ಈ ಕಂಪೆನಿಗಳು ತನ್ನ ನೈಜ ಮುಖವನ್ನು ತೋರಿಸಲಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು

ಹೋರಾಟ ಸಮಿತಿ, ಸಿ‌ಐಟಿಯು, ಕರ್ನಾಟಕ ರಕ್ಷಣಾ ವೇದಿಕೆ, ಅಲ್ಪ ಸಂಖ್ಯಾತರ ಆಟೋ ರಿಕ್ಷಾ ಚಾಲಕ ಸಂಘ ಮೊದಲಾದ ಸಂಘಟನೆಗಳು ತಮ್ಮ ಬೆಂಬಲವನ್ನು ಸೂಚಿಸಿದ್ದವು.

Related posts

Leave a Reply