Header Ads
Header Ads
Header Ads
Breaking News

ಓಶಿಯನ್ ಪರ್ಲ್ ಹೊಟೇಲ್‌ನವರಿಂದ ಹೊಸ ವರ್ಷಾಚರಣೆ ಮಂಗಳೂರು, ಉಡುಪಿ ಓಶಿಯನ್ ಪರ್ಲ್‌ನಲ್ಲಿ ಹೊಸ ವರುಷ ಸಂಭ್ರಮ 2018 ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ

ಪ್ರತಿಷ್ಠಿತ ಹೊಟೇಲ್ ಎಂಬ ಹೆಗ್ಗಳಿಕೆ ಪಡೆದಿರುವ ಓಶಿಯನ್ ಪರ್ಲ್ ಹೊಟೇಲ್ ಹೊಸ ವರುಷವನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಉಡುಪಿಯ ಕಡಿಯಾಳಿ ಓಶಿಯನ್ ಪರ್ಲ್ ಹಾಗೂ ಮಂಗಳೂರಿನ ಓಶಿಯನ್ ಪರ್ಲ್‌ನಲ್ಲಿ ಈ ಭಾರಿಯ ಹೊಸ ವರುಷ ಸಂಭ್ರಮಕ್ಕೆ ಸಾಕ್ಷಿಯಾಯಿತು.

2018 ರ ಹೊಸ ವರುಷದ ಸಂಭ್ರಮ ಎಲ್ಲೆಡೆ ಜೋರಾಗಿತ್ತು. ಮಂಗಳೂರು ಹಾಗೂ ಉಡುಪಿಯ ಹೆಸರಾಂತ ಹೊಟೇಲ್ ಎಂಬ ಹೆಗ್ಗಳಿಕೆ ಪಡೆದಿರುವ ಓಶಿಯನ್ ಪರ್ಲ್ ಹೊಟೇಲ್‌ನವರು 2018 ನೇ ಹೊಸ ವರುಷವನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಮಂಗಳೂರಿನ ಹೊಟೇಲ್‌ಲಾದ ಓಶಿಯನ್ ಪರ್ಲ್‌ನವರು ಟಿ‌ಎಮ್‌ಎ ಪೈ ಕನ್ವೆನ್ಷನಲ್ ಸೆಂಟರ್‌ನಲ್ಲಿ ಹೊಸ ವರುಷವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು. ಇದೇ ವೇಳೆ ಹೊಸ ವರ್ಷಾಚರಣೆಗೆ ಬಂದ ಜನರಿಗೆ ಫನ್ನಿ ಗೇಮ್ಸ್‌ಗಳಲ್ಲಿ ಭಾಗವಹಿಸಿ, ಖುಷಿ ಪಟ್ಟರು.

ಇತ್ತ ಉಡುಪಿಯ ಕಡಿಯಾಳಿ ಓಶಿಯನ್ ಪರ್ಲ್‌ನಲ್ಲೂ ಹೊಸ ವರುಷವನ್ನು ಸಂಭ್ರಮದಿಂದ ಆಚರಿಸಲಾಯಿತು. 2018 ರ ಹೊಸ ವರುಷದಲ್ಲಿ ಜನತೆ ಭಾಗವಹಿಸಿ, ಡಿಜೆ, ಮ್ಯೂಸಿಕ್‌ಗೆ ಹೆಜ್ಜೆ ಹಾಕಿದ್ರೂ, ಹೊಸ ವರುಷ ಅಂಗವಾಗಿ ಓಶಿಯನ್ ಪರ್ಲ್‌ನವರು ಪಾರ್ಟಿ ಆಯೋಜಿಸಿದ್ದರು.

Related posts

Leave a Reply