
ಬೆಂಗಳೂರು : ಭಾರತೀಯ ರೈಲ್ವೇಯ ಸಹ ಸಂಸ್ಥೆ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ವತಿಯಿಂದ ವೈಟ್ ಫೀಲ್ಡ್ ಪ್ರಾಂಗಣದಲ್ಲಿ 72 ನೇ ಗಣ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾದ ಗ್ರೂಪ್ ಜನರಲ್ ಮ್ಯಾನೇಜರ್ ಡಾ.ಅನೂಪ್ ದಯಾನಂದ್ ಸಾಧು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಾ.ಅನೂಪ್ ದಯಾನಂದ್ ಅವರು, ಭಾರತೀಯ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ಹಾಗೂ ಪ್ರಜಾಪ್ರಭುತ್ವದ ಧ್ಯೇಯವನ್ನು ಕಾಪಾಡುವಲ್ಲಿ ಪ್ರತಿಯೊಬ್ಬ ನಾಗರಿಕರು ಕರ್ತವ್ಯ ಬದ್ಧರಾಗಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯನಿರ್ವಣೆಯಲ್ಲಿ ಅತ್ಯುತ್ತಮ ನಿರ್ವಣೆ ತೋರಿದ ಸಿಬ್ಬಂದಿಗಳನ್ನು ಹಾಗೂ ಸಂಸ್ಥೆಯ ಸೇವಾಧಾತರನ್ನು ಈ ಸಂದರ್ಭದಲ್ಲಿ ಡಾ. ಅನೂಪ್ ದಯಾನಂದ್ ಹಾಗೂ ಸಂಸ್ಥೆಯ ನೌಕರರ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ರೆಬಕಾ ಸಿಂಗ್ ಅವರು ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದರು.
ಟರ್ಮಿನಲ್ ಮ್ಯಾನೇಜರ್ ಡಿ.ಅಮಾಲನ್ ಅವರು ವಂದಿಸಿದರು.