Breaking News

ಕಂಟೈನರ್ ಲಾರಿಗೆ ಬೈಕ್ ಢಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು

ಸುಳ್ಯ: ಮದೆನಾಡು ಸಮೀಪ ಕಂಟೈನರ್ ಲಾರಿಗೆ ಬೈಕೊಂದು ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿ ಬುದ್ಧ ನಾಯ್ಕ ರವರ ಪುತ್ರ ಜಯರಾಮ ಮೃತಪಟ್ಟ ಯುವಕ.

ಮಡಿಕೇರಿ ತಾಲೂಕಿನ ಮಕ್ಕಂದೂರಿನ ಕೆನರಾ ಬ್ಯಾಂಕಿನ ಶಾಖೆಯಲ್ಲಿ ಉದ್ಯೋಗಿಯಾಗಿದ್ದ ಜಯರಾಮರು 15  ದಿನದ ರಜೆಯಲ್ಲಿ ಊರಿಗೆ ಬಂದಿದ್ದರು.  ಭಡ್ತಿಯೊಂದಿಗೆ ಕಛೇರಿಗೆ ಹಾಜರಾಗಬೇಕಿದ್ದ ಅವರು ರಾತ್ರಿ ತನ್ನ ಬಜಾಜ್ ಡಿಸ್ಕವರ್ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮದೆನಾಡು ಎಂಬಲ್ಲಿ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಮೃತ ಪಟ್ಟರು., ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಮರುದಿನ ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ರಂಗತ್ತಮಲೆಗೆ ಕರೆತರಲಾಯಿತು.

Related posts

Leave a Reply