Header Ads
Breaking News

ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ ಪೊಲೀಸ್ : ಮೇಲಾಧಿಕಾರಿಗಳಿಗೆ ಒಪ್ಪಿಸಿದ ಸ್ಥಳೀಯರು

ಕಂಠ ಪೂರ್ತಿ ಮದ್ಯ ಸೇವಿಸಿ ಕುಂಬಳೆ ಪರಿಸರದಲ್ಲಿ ಪೊಲೀಸ್ ವಾಹನ ಚಲಾಯಿಸಿದ ಪೊಲೀಸ್ ಚಾಲಕನೊಬ್ಬನನ್ನು ಊರವರು ತಡೆದು ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇದರ ವೀಡಿಯೋವನ್ನು ಊರವರೇ ಚಿತ್ರೀಕರಿಸಿ ವಾಟ್ಸಪ್ ನಲ್ಲಿ ಹರಿಯಲು ಬಿಟ್ಟಿದ್ದಾರೆ. ಕೂಡಲೇ ಎಚ್ಚೆತ್ತುಗೊಂಡ ಕುಂಬಳೆ ಸರ್ಕಲ್ ಕಾಸರಗೋಡು ಪೊಲೀಸ್ ವರಿಷ್ಟಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಮೇಲಾಧಿಕಾರಿಗಳು ಕೂಡಲೇ ಪೊಲೀಸ್ ವಾಹನ ಚಾಲಕನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಮದ್ಯ ಸೇವಿಸಿರುವುದನ್ನು ಖಚಿತ ಪಡಿಸಿದ್ದಾರೆ. ಕಾಸರಗೋಡು ಎ ಆರ್ ಕ್ಯಾಂಪಿನಿಂದ ಕುಂಬಳೆ ಠಾಣೆಗೆ ಕರ್ತವ್ಯಕ್ಕೆ ಆಗಮಿಸಿದ ದಾಸ್ ಎಂಬ ಹೆಸರಿನಲ್ಲಿರುವ ಪೊಲೀಸ್ ವಾಹನ ಚಾಲಕನಾಗಿದ್ದಾನೆ.

Related posts

Leave a Reply

Your email address will not be published. Required fields are marked *