Header Ads
Header Ads
Breaking News

ಕಂದಕಕ್ಕೆ ಉರುಳಿದ ಪಿಕಪ್ ವಾಹನ: ಪಿಕಪ್‌ನಲ್ಲಿದ್ದ ಎಂಟು ಮಂದಿಗೆ ಗಾಯ

ಪಿಕಪ್ ವಾಹನವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಎಂಟು ಮಂದಿ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನ ಮಲಯಮಾರುತ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮಲಯ ಮಾರುತ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದವರನ್ನು ಬೆಳ್ತಂಗಡಿ ಮೂಲದ ಬಿಳ್ಳದಾಳ ಎಂಬ ಗ್ರಾಮ ನಿವಾಸಿಗಳು ಎಂದು ಗುರುತಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪಿಕಪ್ ವಾಹನದಲ್ಲಿವರು ಹಾಸನದ ಪುರದಮ್ಮ ದೇವಸ್ಥಾನದಲ್ಲಿ ಪೊಜೆ ಮುಗಿಸಿ ನಿನ್ನೆ ರಾತ್ರಿ ೮:೩೦ರ ಸುಮಾರಿಗೆ ವಾಪಸ್ಸಾಗುತ್ತಿದ್ದ ವೇಳೆ ಅ ದುರಂತ ಸಂಭವಿಸಿದೆ. ವಾಹನದ ಸ್ಟಿಯರಿಂಗ್ ತುಂಡಾಗಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸಣ್ಣಪುಟ್ಟ ಗಾಯಗೊಂಡಿದ್ದ ಆರು ಮಂದಿಯನ್ನು ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply