Header Ads
Header Ads
Header Ads
Breaking News

ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶಿತರಾದ ರೈತರು ತಹಶೀಲ್ದಾರ್ ಕಛೇರಿ ತನಕ ಪಾದಯಾತ್ರೆಗೆ ಸಿದ್ಧತೆ ರೈತ ಸಂಘದ ಹಸಿರು ಸೇನೆ ಎಚ್ಚರಿಕೆ

 

ವಿಟ್ಲ: ಉಸ್ತುವಾರಿ ಸಚಿವರ ಪಿ ಎ ತರಹ ಕೆಲಸ ಮಾಡುವ ಕಂದಾಯ ಇಲಾಖೆಯ ಮುಟ್ಟಾಳ ಅಧಿಕಾರಿ ಎರಡು ಮೂರು ಕಡೆಗೆ ಹೋಗಿ ದರ್ಬಾರು ಮಾಡಲು ಆಸ್ತಿ ಇವರ ಸಂಬಂಧಿಕರದ್ದಾಗಿದೆಯಾ. ರೈತರ ಹಣ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗೆ ಇಷ್ಟು ಪೊಗರಿದ್ದರೆ ರೈತರಾದ ನಮಗೆ ಇನ್ನೆಷ್ಟು ಇರಬೇಕಾಗಿದೆ. ಪಾಣೆಮಂಗಳೂರಿನಿಂದ ತಹಸೀಲ್ದಾರ್ ಕಛೇರಿ ವರೆಗೆ ಪಾದಯಾತ್ರೆ ನಡೆಸಿ ಕಛೇರಿಗೆ ಬೀಗ ಜಡಿಯುವ ಕಾರ್ಯವನ್ನು ರೈತ ಸಂಘದ ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ಸದ್ಯವೇ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಎಚ್ಚರಿಕೆ ನೀಡಿದೆ. ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ರೈತ ಸಂಘದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕಂದಾಯ ಸಚಿವರ ಹೇಳಿಕೆಯ ಪ್ರಕಾರ ಕುಮ್ಕಿ 5 ಎಕ್ರೆ ಭೂಮಿಯನ್ನು ರೈತರಿಗೆ ನೀಡುತ್ತೇವೆ ಅಂತ ಹೇಳಿದರೂ ಅಧಿಕಾರಿಗಳ ದಾಳಿ ನಿಂತಿಲ್ಲ. ಪ್ರಬಲ ರಾಜಕಾರಣಿಗಳಿಂದ 10 – 20 ಎಕ್ರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಯಾವ ಅಧಿಕಾರಿಗಳೂ ಮುಂದೆ ಹೋಗುತ್ತಿಲ್ಲ ಎಂದು ತಿಳಿಸಿದರು. ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ರೈತ ಹೋರಾಟಗಾರ ಸುಬ್ರಹ್ಮಣ್ಯ ಭಟ್ ಸಜಿಪ ಉಪಸ್ಥಿತರಿದ್ದರು.

ವರದಿ: ಮುಹಮ್ಮದ್ ಆಲಿ ವಿಟ್ಲ

Related posts

Leave a Reply