Breaking News

ಕಂದಾಯ ಸಿಬ್ಬಂದಿಗಳಿಗೆ ರಕ್ತದಾನ ಶಿಬಿರ ಕಾರ್ಯಕ್ರಮ

ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕಂದಾಯ ಸಿಬ್ಬಂದಿಗಳಿಗೆ ರಕ್ತದಾನ ಶಿಬಿರ ಕಾರ್ಯಕ್ರಮವು ಕುಂದಾಪುರದ ಮಿನಿ ವಿಧಾನಸೌಧದ ಕೋಟ್ ಹಾಲ್‌ನಲ್ಲಿ ನಡೆಯಿತು. ರಕ್ತದಾನ ಮಹಾದಾನ ಎನ್ನುವ ದೃಷ್ಟಿಯಲ್ಲಿ ಕುಂದಾಪುರದ ರೆಡ್ ಕ್ರಾಸ್ ಸಮಸ್ಥೆಯ ಬ್ಲಡ್ ಬ್ಯಾಂಕ್ ಹಾಗೂ ಉಪವಿಭಾಗಾಧಿಕಾರಿಗಳ ಕಚೆರಿ ಜಂಟಿ ನೇತೃತ್ವದಲ್ಲಿ ಆಯೋಜಿಸಲಾದ ರಕ್ತ ದಾನ ಶಿಬಿರದಲ್ಲಿ ಸುಮಾರು ಐವತ್ತು ಜನ ಕಂದಾಯ ಸಿಬ್ಬಂದಿಗಳು ರಕ್ತದಾನ ಮಾಡಿದರು. ಈ ಸಂದರ್ಭ ಸ್ವತಃ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಅವರೂ ರಕ್ತದಾನ ಮಾಡುವ ಮೂಲಕ ಇತರ ಅಧಿಕಾರಿಗಳಿಗೆ ಪ್ರೋತ್ಸಾಹ ನಿಡಿದರು. ಈ ಸಮದರ್ಭ ಮಾತನಾಡಿದ ಅವರು, ಉಪವಿಭಾಗಾದಿಕಾರಿಯಾಗಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷೆಯಾಗಿ ನಾವು ಇವತ್ತು ಜನಸಾಮಾನ್ಯರಿಗೆ ಮಾದರಿಯಾಗಿ ಈ ಶಿಬಿರ ಆಯೋಜನೆ ಮಾಡಿದ್ದೇವೆ. ಒಬ್ಬನ ರಕ್ತದಾನದಿಂದ ಆರು ಜನರ ಜೀವ ಉಳಿಸಬಹುದು. ರಕ್ತವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ರಕ್ತದ ಅವಶ್ಯಕತೆ ಬಹಳಷ್ಟು ಇದೆ. ಎಲ್ಲರೂ ರಕ್ತದಾನ ಮಾಡಿದರೆ ರಕ್ತದ ಕೊರತೆ ಕಾಣಿಸದು ಈ ದೃಷ್ಟಿಯಲ್ಲಿ ಜಾಗೃತಿ ಮುಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಲಲಾಗಿದೆ ಎಂದರು.ಇದೇ ಸಂದರ್ಬ ಮಾತನಾಡಿದ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಅತ್ಯಂತ ಉತ್ತಮ ಗುಣಮಟ್ಟದ ರಕ್ತ ಸಂರಕ್ಷಣಾ ಘಟಕ ಹೊಂದಿದೆ. ಸರ್ಕಾರೀ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ರಕ್ತ ನೀಡುವುದು ನಮ್ಮ ಪ್ರಥಮ ಆದ್ಯತೆ. ಬಿಪಿ‌ಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ರಕ್ತ ವಿತರಣೆ ಮಾಡಲಾಗುತ್ತದೆ. ಉಳಿದವರಿಗೆ ಅತ್ಯಂತ ಕನಿಷ್ಟ ದರದಲ್ಲಿ ರಕ್ತ ನೀಡಲಾಗುತ್ತದೆ. ರಕ್ತದಾನ ಮಾಡಲು ಆಸಕ್ತಿ ಹೊಮದಿದವರು ಶಿಬಿರಗಳಲ್ಲಿಯೇ ಬಮದು ರಕ್ತದಾನ ಮಾಡಬೆಕಿಲ್ಲ. ಬ್ಲಡ್ ಬ್ಯಾಂಕ್‌ನಲ್ಲಿ ಬಂದೂ ರಕ್ತ ನೀಡಬಹುದು ಎಂದರು.

Related posts

Leave a Reply