Header Ads
Header Ads
Breaking News

ಕಂದಾವರ ಗ್ರಾ.ಪಂ.ನಿಂದ ಬಡವರಿಗೆ ವಂಚನೆ : ರಮೇಶ್ ಕಾವೂರು ಆರೋಪ

ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಮಾತೊಂದಿದೆ. ಸರ್ಕಾರಿ ಸವಲತ್ತುಗಳನ್ನು ಪಡೆಯಬೇಕಿರುವ ಬಡ ಮಂದಿಯ ಪರಿಸ್ಥಿತಿಯೂ ಈ ಮಾತಿನಂತೆಯೇ ಆಗಿದೆ. ಬಡಜನತೆಯ ಪರವಾಗಿ ಕೆಲಸ ಮಾಡಬೇಕಿದ್ದ ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಯಾರಿಗೋ ಸಿಗಬೇಕಿದ್ದ ಸವಲತ್ತುಗಳು ಇನ್ಯಾರದೋ ಪಾಲಾಗುತ್ತಿವೆ. ಇದಕ್ಕೆ ಉದಾಹರಣೆ ಎನ್ನುವಂತೆ ಕಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಘಟನೆಗಳು ನಡೆದಿವೆ ಎನ್ನುವ ಆರೋಪಗಳು ಕೇಳಿಬಂದಿವೆ. 

ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ರಮೇಶ್ ಕಾವೂರು, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ,/ಪಂಗಡಗಳ ಕಡುಬಡವರ ಮಹಿಳೆಯರ ಜೀವನವನ್ನು ಸುದಾರಿಸಲು ಹೊಲಿಗೆಯಂತ್ರ, ಅಡುಗೆ ಅನಿಲ, ಟಾರ್ಚರ್ ಲೈಟ್ ಇತ್ಯಾದಿಗಳನ್ನು ನೀಡಲು ಪಂಚಾಯತ್‌ಗೆ ಅನುದಾನವನ್ನು ನೀಡುತ್ತದೆ. ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರ ಹಣದ ದಾಹದಿಂದ ಸರಕಾರದ ಯೋಜನೆಯು ಜನಸಾಮಾನ್ಯರನ್ನು ತಲುಪುತ್ತಿಲ್ಲ. ಕಂದಾವರ ಗ್ರಾ.ಪಂ. ರಾಜ್ಯ ಸರ್ಕಾರದ ವತಿಯಿಂದ ನೀಡಲಾದ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ನೀಡದೆ ಮತ್ತು ಹಲವರ ಹೆಸರನ್ನು ಪರಿಶಿಷ್ಟ ಜಾತಿ/ಪಂಗಡಗಳಿಗೆ ದಲಿತರ ಮೀಸಲು ನಿಧಿ ೨೫%ರ ಯೋಜನೆಯಡಿ ನೀಡಿರುವ ಸೌಲಭ್ಯಗಳ ಪಟ್ಟಿಯಲ್ಲಿ ದಾಖಲಿಸಿ, ಹಣವನ್ನು ಕಬಳಿಸಲಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕೃಷ್ಣ, ರಾಧಾಕೃಷ್ಣ, ಈಶ್ವರ್ ಸೂಟರ್‌ಪೇಟೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply