Header Ads
Breaking News

ಕಂಬಳಕ್ಕೆ ಸೆನ್ಸರ್, ಓಟಗಾರರಿಗೆ ವಿಮೆ ಯೋಜನೆ; ಎಂ.ಎನ್.ರಾಜೇಂದ್ರ ಕುಮಾರ್

ವಿಶ್ವ ಮಾನ್ಯತೆಯನ್ನು ಪಡೆಯುತ್ತಿರುವ ಕಂಬಳವನ್ನು ಇದೀಗ ಎಲ್ಲೆಡೆಯಲ್ಲಿಯೂ ಕೂಡ ಗುರುತಿಸಿ ಕಂಬಳಕ್ಕೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ವತಿಯಿಂದ ಕಂಬಳ ಓಟಗಾರರಿಗೆ ಸನ್ಮಾನವನ್ನು ಮಾಡಲಾಯಿತ್ತು.

 

ಎಸ್‍ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಂಬಳದಲ್ಲಿ ದಾಖಲೆಗಳನ್ನು ಮಾಡಿರುವ, ಹಲವು ವರ್ಷಗಳಿಂದ ಕೋಣಗಳನ್ನು ಓಡಿಸುತ್ತಿರುವ ಓಟಗಾರರನ್ನು ಗುರುತಿಸಿ ಸನ್ಮಾನಿಸಲಾಯಿತ್ತು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (ಎಸ್‍ಸಿಡಿಸಿಸಿ) ಬ್ಯಾಂಕ್ ವತಿಯಿಂದ ಕಂಬಳದಲ್ಲಿ ಹೆಚ್ಚು ನಿಖರ ಮತ್ತು ಶೀಘ್ರ ಫಲಿತಾಂಶಕ್ಕೆ ಅನುಕೂಲವಾಗುವ ಸೆನ್ಸರನ್ನು ಅಳವಡಿಸಲಾಗುವುದು ಹಾಗೂ ಕಂಬಳ ಓಟಗಾರರಿಗೆ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದ್ದರು. ಓಟಗಾರರಿಂದಾಗಿ ಕಂಬಳ ಇಂದು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಡುತ್ತಿದೆ. ಹೊಸ ಮಾದರಿಯ ಸೆನ್ಸರ್ ಅಳವಡಿಸಲು 4 ಲಕ್ಷ ರೂ. ತಗಲಲಿದ್ದು ಈ ಬಗ್ಗೆ ಜಿಲ್ಲಾ ಕಂಬಳ ಸಮಿತಿಯವರು ಎಸ್‍ಸಿಡಿಸಿಸಿ ಬ್ಯಾಂಕ್‍ಗೆ ಮನವಿ ಸಲ್ಲಿಸಿದ್ದರು. ಸೆನ್ಸರ್ ಅಳವಡಿಸಿದರೆ ನಿಖರ ಫಲಿತಾಂಶ ದೊರೆಯುತ್ತದೆ. ಸಮಯ ಕೂಡ ಉಳಿಯುತ್ತದೆ. ಇದರಿಂದಾಗಿ ಈ ಮನವಿಯನ್ನು ಬ್ಯಾಂಕ್ ಪುರಸ್ಕರಿಸುತ್ತದೆ ಎಂದರು.

 

ದಾಖಲೆ ನಿರ್ಮಿಸಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ, ಬಜಗೋಳಿಯ ನಿಶಾಂತ ಶೆಟ್ಟಿ ಅವರಿಗೆ ತಲಾ 25,000 ರೂ. ನೀಡಿ ಸಮ್ಮಾನಿಸಲಾಯಿತು. ಈ ಹಿಂದೆ ದಾಖಲೆ ನಿರ್ಮಿಸಿರುವ ಓಟಗಾರರಾದ ಇರ್ವತ್ತೂರು ಆನಂದ, ಹಕ್ಕೇರಿ ಸುರೇಶ ಶೆಟ್ಟಿ, ಅಳದಂಗಡಿ ರವಿ ಹಾಗೂ ಪಣಪೀಲು ಪ್ರವೀಣ್ ಕೋಟ್ಯಾನ್ ಅವರಿಗೆ ತಲಾ 10,000 ರೂ. ನೀಡಿ ಗೌರವಿಸಲಾಯಿತು. ಹಿರಿಯ ಓಟಗಾರರಾದ ಪೇಜಾವರ ಭಾಸ್ಕರ್, ವೀರಕಂಬ ಜಯಂತ ಶೆಟ್ಟಿ, ನಕ್ರೆ ಜಯಕರ ಮಡಿವಾಳ, ಪಲಿಮಾರು ದೇವೇಂದ್ರ ಕೋಟ್ಯಾನ್, ಪ್ರವೀಣ್ ಶೆಟ್ಟಿ ಸಾಣೂರು, ಈದು ಅಜಿತ್ ಕುಮಾರ್, ವಿಜಯ ಕುಮಾರ್ ಕಂಗಿನಮನೆ, ಮಾರ್ನಾಡು ರಾಜೇಶ ಅವರನ್ನು ಅಭಿನಂದಿಸಲಾಯಿತು. ಅಲ್ಲದೆ ಯೋಗ ದಲ್ಲಿ ಗಿನ್ನೆಸ್ ದಾಖಲೆ ಮಾಡಿದ ಬಾಲ ಸಾಧಕಿ ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತ್ತು.

 

ಈ ಸಂದರ್ಭ ನಿರ್ದೇಶಕರಾದ ಡಾ| ದೇವಿ ಪ್ರಸಾದ್ ಶೆಟ್ಟಿ ಬೆಳಪು, ಭಾಸ್ಕರ ಕೋಟ್ಯಾನ್, ಶಶಿಕುಮಾರ್ ರೈ ಬಾಳ್ಯಟ್ಟು, ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ, ವಿಜಯ ಕುಮಾರ್ ಕಂಜಿಲಮನೆ, ಗುಣಪಾಲ ಕಡಂಬ, ಪ್ರಸಾದ್ ಕೌಶಲ್ ಶೆಟ್ಟಿ, ಸದಾಶಿವ ಉಳ್ಳಾಲ್, ಕೊಂಡೆಟ್ಟು ಸುಕುಮಾರ ಶೆಟ್ಟಿ, ಶ್ರೀಧರ್, ಚಿತ್ತರಂಜನ್ ಭಂಡಾರಿ, ಅರುಣ್ ಶೆಟ್ಟಿ, ಜಯಪ್ರಕಾಶ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *