Header Ads
Breaking News

ಕಂಬಳದ ಚಿನ್ನದ ಓಟಗಾರ ಶ್ರೀನಿವಾಸ ಗೌಡ; ಕೆ.ಗುಣಪಾಲ ಕಡಂಬ ಹೇಳಿಕೆ

ಕಂಬಳ ಅಕಾಡೆಮಿಯಿಂದ ತರಬೇತಿಯನ್ನು ಪಡೆದು ಕಂಬಳದಲ್ಲಿ ಚಿರತೆಯ ವೇಗದಲ್ಲಿ ಕೋಣಗಳನ್ನು ಓಡಿಸುತ್ತಾ ಕಳೆದ 8 ವರ್ಷಗಳಿಂದ ನೂರಕ್ಕಿಂತಲೂ ಅಧಿಕ ಚಿನ್ನದ ಪದಕಗಳನ್ನು ಪಡೆಯುತ್ತಾ ಬಂದಿರುವ ಚಿನ್ನದ ಓಟಗಾರ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಅವರ ಸಾಧನೆ ಕಂಬಳ ಅಕಾಡೆಮಿಗೆ ಹೆಮ್ಮೆಯ ವಿಷಯ ಎಂದು ಕಂಬಳ ಅಕಾಡೆಮಿಯ ಸಂಚಾಲಕ ಕೆ.ಗುಣಪಾಲ ಕಂಡಂಬ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಂಬಳ ಅಕಾಡೆಮಿಯಿಂದ 2011ರಲ್ಲಿ ಶಿರ್ಲಾಲಿನಲ್ಲಿ ನಡೆದ ಕಂಬಳದ ಓಟಗಾರರ ತರಬೇತಿಗೆ ಒತ್ತಾಯದ ಮೇರೆಗೆ ಬಂದು ಸೇರಿದ್ದ ಮೊದಲ ಬ್ಯಾಚಿನ ಶಿಬಿರಾರ್ಥಿ ಶ್ರೀನಿವಾಸ ಗೌಡ ಅವರು ಅಲ್ಲಿ ಗಮನವಿಟ್ಟು ತರಬೇತಿಯನ್ನು ಪಡೆದು ಕಂಬಳದ ಓಟಗಾರರಲ್ಲಿ ಮೊದಲ ಸ್ಥಾನದಲ್ಲಿರುವ ಓಟಗಾರರಾಗಿದ್ದು ಅವರ ಸಾಧನೆಯು ಅಕಾಡೆಮಿಯ ಹಿರಿಮೆಯನ್ನು ಹೆಚ್ಚಿಸಿದೆ.

ಕೆಲವೊಂದು ಮಾಧ್ಯಮಗಳು ಶ್ರೀನಿವಾಸ ಗೌಡ ಅವರು ಯಾವುದೇ ಅಕಾಡಿಮಿಕ್‍ನಿಂದ ತರಬೇತಿಯನ್ನು ಪಡೆದಿಲ್ಲವೆಂದು ತಪ್ಪು ಸಂದೇಶಗಳನ್ನು ನೀಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ ಕಡಂಬ ಅವರು ಈ ವರ್ಷ ನಡೆದ ಕಂಬಳದಲ್ಲಿ ಈಗಾಗಲೇ 32 ಬಹುಮಾನಗಳನ್ನು ಅವರು ಪಡೆದುಕೊಂಡಿದ್ದಾರೆ. ಕಳೆದ 2-3 ಟರ್ಮಿನ ಕ್ರೀಡಾ ರತ್ನ ಪ್ರಶಸ್ತಿಯ ಪರಿಶೀಲನಾ ಮತ್ತು ಆಯ್ಕೆ ಸಮಿತಿಯ ರಾಜ್ಯಮಟ್ಟದ ಸದಸ್ಯನಾಗಿದ್ದು ಈ ಸಂದರ್ಭದಲ್ಲಿ ಕ್ರೀಡಾ ರತ್ನ ಪ್ರಶಸ್ತಿಯಗಾಗಿ ಪತ್ರಿಕಾ ಪ್ರಕಟನೆಯ ನಂತರ ಅರ್ಜಿ ಹಾಕಿದರು ಶ್ರೀನಿವಾಸ ಗೌಡರು ಮಾತ್ರ. ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದು ಹೇಳಿದ್ದರು.

ಕಂಬಳದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಮಾತನಾಡಿ ಕಂಬಳದಲ್ಲಿ ಕ್ರೀಡೆಯಲ್ಲಿ ತಾನು ಸಾಧನೆ ಮಾಡಲು ಅಕಾಡೆಮಿಯೇ ಕಾರಣ. ಅಕಾಡೆಮಿಯಿಂದ ತರಬೇತಿ ಪಡೆಯದಿದ್ದರೆ ತಾನು ಕೋಣಗಳನ್ನು ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ಕೋಣಗಳನ್ನು ಓಡಿಸಲು ಕಂಬಳದ ನುರಿತ ಓಟಗಾರರಾದ ಕಾಬೆಟ್ಟು ರಘುರಾಮ ಶೆಟ್ಟಿ, ಇರ್ವತ್ತೂರು ಆನಂದ ಕೋಟ್ಯಾನ್, ನಕ್ರೆ ಜಯಕರ ಮಡಿವಾಳ, ಪಲಿಮಾರ್ ದೇವೇಂದ್ರ ಕೋಟ್ಯಾನ್ ಹಾಗೂ ರಾಜೇಶ್ ಅವರು ತನಗೆ ತರಬೇತಿಯನ್ನು ನೀಡಿದ್ದರಿಂದ ತನ್ನ ಸಾಧನೆಗೆ ಸಹಕಾರಿಯಾಗಿದೆ. ಕಂಬಳ ಅಕಾಡೆಮಿಯ ನಿದೇರ್ಶಕರಾಗಿರುವ ಸರಪಾಡಿ ಅಪ್ಪಣ್ಣ, ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ ಶೆಟ್ಟಿ, ಸುರೇಶ್.ಕೆ.ಪೂಜಾರಿ, ಜ್ವಾಲ ಪ್ರಸಾದ್ ಮತ್ತು ಸ್ಕೈವ್ಯೂ ಸಂಸ್ಥೆಯ ರತ್ನಾಕರ ಎನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *