Header Ads
Header Ads
Breaking News

ಕಂಬಳ ಕೋಣಗಳ ಯಜಮನರಾದ ಕರಿಂಜೆ ವಿನು ವಿಶ್ವನಾಥ ಶೆಟ್ಟಿಯವರು ಹೃದಯಾಘಾತದಿಂದ ನಿಧನ

ಕಂಬಳ ಕೋಣಗಳ ಯಜಮನರಾದ ಕರಿಂಜೆ ವಿನು ವಿಶ್ವನಾಥ ಶೆಟ್ಟಿಯವರು ಹೃದಯಾಘಾತದಿಂದ ನಿಧರಾಗಿದ್ದರೆ. ಸಿದ್ದಕಟ್ಟೆಯ ಹೊಕ್ಕಾಡಿಯಲ್ಲಿ ಇಂದು ನಡೆದ ಕಂಬಳದಲ್ಲಿ ಭಾಗಿಯಾಗಿದ್ದು, ಇಂದಿನ ಕಂಬಳದಲ್ಲಿ ಇವರ ತಂಡ ಪ್ರಥಮ ಸ್ಥಾನವನ್ನು ಗಳಿಸಿತ್ತು.

ನೂರಕ್ಕೂ ಮಿಕ್ಕಿದ ಕಂಬಳ ಕೋಣಗಳ ಯಜಮಾನರುಗಳಲ್ಲಿ ನಮಗೆ ಕಾಣಸಿಗುವ ಅಪರೂಪದ ವ್ಯಕ್ತಿತ್ವ ಎಂದರೆ ಅದು……….ವಿನು ವಿಶ್ವನಾಥ ಶೆಟ್ಟಿ . ಕೋಣಗಳನ್ನು ಸಾಕುವ ವಿಧಾನದಲ್ಲಿ ತನ್ನದೇ ಆದ ಒಂದು ಶಿಸ್ತುಬದ್ಧ ಪಧ್ದತಿಯನ್ನು ಅನುಸರಿಸಿಕೊಂಡು ಬಂದಿದ್ದ ವಿಶ್ವನಾಥ ಶೆಟ್ಟರು, ಯಶಸ್ವೀ ಪೋಷಕ, ವಿಜಯದ ರೂವಾರಿಯೆಂದೇ ಖ್ಯಾತನಾಮರಾಗಿದ್ದರು. ದುಬಾಯಿ, ಬೆಹರೈನ್ ಸೇರಿದಂತೆ ದೇಶ, ವಿದೇಶಗಳಲ್ಲಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು ಮೂಲತಃ ಮೂಡಬಿದಿರೆ ಸಮೀಪದ ಕರಿಂಜೆಯವರು.

ವಿ4 ನ್ಯೂಸ್ ಜೊತೆಗೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದ ವಿನು ವಿಶ್ವನಾಥ ಶೆಟ್ಟರು ಕಾಮಿಡಿ ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ ತೆಲಿಕದ ತೆನಾಲಿ ತಂಡದ ಮಾಲೀಕರಾಗಿದ್ದರು.

Related posts

Leave a Reply