Header Ads
Header Ads
Breaking News

ಕಂಬಳ ಕ್ರೀಡೆಯ ಮೇಲೆ ನಿಷೇಧ ತೆರವು ಆತಂಕವಿಲ್ಲದೇ ನಡೆಯುತ್ತಿರುವ ಪಾರಂಪರಿಕ ಕಂಬಳ ಮನಸೂರೆ ಗೊಂಡ ಕಟಪಾಡಿ ಬೀಡು ಕಂಬಳ

ಕಂಬಳ ಕ್ರೀಡೆಯ ಮೇಲೆ ನಿಷೇಧ ತೆರವಾದ ಬಳಿಕ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪಾರಂಪರಿಕ ಕಂಬಳಗಳು ಆತಂಕವಿಲ್ಲದೆ ನಡೆಯುತ್ತಿವೆ. ಉಡುಪಿಯ ಕಟಪಾಡಿಯಲ್ಲಿ ನಡೆದ ಕಂಬಳ ರಾಜ ಮನೆತನದ ಸಂಪ್ರದಾಯದಂತೆ ವೈಭವದಿಂದ ನಡೆಯಿತುತುಳುನಾಡಿನ ಆರಾಧನ ಜಾನಪದ ಕ್ರೀಡೆ ಕಂಬಳ. ಇತ್ತೀಚಿನ ಕೆಲ ವರ್ಷಗಳಲ್ಲಿ ನ್ಯಾಯಾಲಯದಲ್ಲಿ ಹಲವು ಬಾರಿ ನಿಷೇಧದ ಆತಂಕಕ್ಕೊಳಗಾಗಿ ಸದ್ಯ ಷರತ್ತು ಬದ್ಧ ಕಂಬಳ ನಡೆಯುತ್ತಿದೆ. ತುಳುನಾಡಿನಲ್ಲಿ ಕೆಲವೆಡೆ ಕಂಬಳ ಕ್ರೀಡೆ ಪ್ರತಿಷ್ಠೆಯ ಕ್ರೀಡೆಯಾಗಿ ನಡೆಯಲ್ಪಡುತ್ತಿದ್ದರೆ ಇನ್ನು ಕೆಲವೆಡೆ ದೈವ ದೈವರ ಹೆಸರಿನಲ್ಲಿ ಆರೈಧನಾ ಕ್ರೀಡೆಯಾಗಿ ನಡೆಯುತ್ತಿದೆ. ಈ ಕಾರಣದಿಂದ ಕಂಬಳ ಕ್ರೀಡೆಗೆ ನಿಷೇಧ ಹೇರಿದಾಗ ದಾರ್ಮಿಕವಾಗಿ ತೊಂದರೆ ಉಂಟಾಗಿತ್ತು. ಕರಾವಳಿಯ ಹೆಚ್ಚಿನ ಅರಸು ಮನೆತನಗಳಲ್ಲಿ ಕೃಷಿ ಚಟುವಟಿಕೆಯ ಬಳಿಕ ಕಂಬಳ ಸಂಪ್ರದಾಯವಾಗಿ ನಡೆದುಬಂದಿದೆ. ಈಗ ಅರಸು ಮನೆತನಗಲು ಅಳಿದರೂ ಸದ್ಯ ಆಯಾ ಮನೆತನಕ್ಕೆ ಸೇರಿದವರು ಕಂಬಳ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ. ಶತಮಾನಗಳ ಇತಿಹಾಸವಿರುವ ಉಡುಪಿ ಜಿಲ್ಲೆಯ ಕಟಪಾಡಿ ಕಂಬಳ 150 ಜೋಡಿ ಕೋಣಗಳು ಭಾಗವಹಿಸಿದ್ದವು

 ವಿನಯ್ ಬಲ್ಲಾಳ್(ಆಯೋಜಕರು)

ಕಟಪಾಡಿ ಎಂಬ ಪ್ರದೇಶ ತುಳು ನಾಡಿನ ಇತಿಹಾಸದಲ್ಲಿ ಜಾನಪದ ಕತೆಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕೋಟಿ ಚೆನ್ನಯ ಕಾಂತಾಬಾರೆ ಬೂದಬಾರೆ, ಬಬ್ಬುಸ್ವಾಮಿ ಮುಂತಾದ ದೈವಂಶ ಸಂಭೂತರ ಕತೆಗಳಲ್ಲಿ ಕಟಪಾಡಿ ಬೀಡು ಒಂದಲ್ಲ ಒಂದು ಕಾರಣದಿಂದ ಉಲ್ಲೇಖಗೊಂಡಿದೆ. ಈ ಕಾರಣದಿಂದ ಕಟಪಾಡಿಯ ಕಂಬಳಕ್ಕೆ 3 ಜಿಲ್ಲೆಗಳಿಂದ ಜನ ಬರುತ್ತಾರೆ. ಈ ಬಾರಿ ದಾಖಲೆಯ 150ಜೋಡಿ ಕೋಣಗಳು ಭಾಗವಹಿಸಿದ್ದು ದಾಖಲೆ ನಿರ್ಮಸಿತು. ಕಂಬಳದಲ್ಲಿ ನ್ಯಾಯಾಲಯದ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿ ಕಂಬಳವನ್ನು ಆಯೋಜನೆ ಮಾಡಲಾಗಿತ್ತು. ಕಂಬಳದಲ್ಲಿ ಗೆದ್ದ ಕೋಣಗಳಿಗೆ ಚಿನ್ನದ ಪದಕ ನೀಡಲಾಯಿತು.

ರಾಘವೇಂದ್ರ ಪೂಜಾರಿ(ಕಂಬಳ ಕೋಣ ಓಡಿಸುವವರು)

 ಕೃಷಿ ,ಧಾರ್ಮಿಕತೆ ಮತ್ತು ಜಾನಪದ ಈ ಮೂರು ವಿಷಯಗಳೊಂದಿಗೆ ಕಂಬಳ ಕ್ರೀಡೆ ಸೇರಿಕೊಂಡಿದೆ. ಈ ಕಾರಣದಿಂದ ಕಂಬಳ ಕ್ರೀಡೆಗೆ ನಿಷೇಧ ಎದುರಾದಾಗ ಕರಾವಳಿಯ ಧಾರ್ಮಿಕ ಆಚರಣೆಯಲ್ಲೂ ವ್ಯತ್ಯಯವಾಗುತ್ತದೆ. ಈ ಕಾರಣದಿಂದ ಕಂಬಳ ಕ್ರೀಡೆ ನಿಲ್ಲದಂತೆ ಇಲ್ಲಿನ ಜನ ಹೋರಾಡುತ್ತಿದ್ದಾರೆ. ಸದ್ಯ ನಿಷೇಧ ತೆರವಿನಿಂದ ನಡೆದ ಕಂಬಳ ಹೊಸ ಹುರುಪು ಪಡೆಯಿತು

Related posts

Leave a Reply