Header Ads
Breaking News

ಕಂಬಳ ಮಾಡಲು ನಿರ್ಧರಿಸಿದ ದ.ಕ ಜಿಲ್ಲಾ ಕಂಬಳ ಸಮಿತಿ

ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿಕೊಂಡು ಜಿಲ್ಲೆಯಲ್ಲಿ ಒಟ್ಟು 7 ಹಗಲು ಹಾಗೂ ಅಗತ್ಯವಿದ್ದರೆ 2 ದಿನಗಳಲ್ಲಿ ಕಂಬಳವನ್ನು ಮಾಡುವುದೆಂದು ಕಂಬಳ ಸಂಘಟಕರ ಅಭಿಪ್ರಾಯದೊಂದಿಗೆ ದ.ಕ ಜಿಲ್ಲಾ ಕಂಬಳ ಸಮಿತಿಯು ಸಜ್ಜುಗೊಂಡಿದೆ. 

ಮೂಡುಬಿದ್ರೆ ಸಮಾಜ ಮಂದಿರದಲ್ಲಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಜ. 30ರಂದು ಹೊಕ್ಕಾಡಿಗೋಳಿ, ಫೆ.6ಕ್ಕೆ ಐಕಳ, ಫೆ-13 (ವಾಮಂಜೂರು ತಿರುವೈಲ್ ಗುತ್ತು), ಫೆ-20 (ಮೂಡುಬಿದಿರೆ ಕೋಟಿ-ಚೆನ್ನಯ), ಫೆ-27 (ಮಿಯಾರು), ಮಾ-6 (ಬಂಗ್ರ ಕೂಳೂರು) ಮಾ-20 (ವೇಣೂರು ಪೆರ್ಮುಡ)ದಲ್ಲಿ ಕಂಬಳವನ್ನು ಮಾಡುವುದೆಂದು ದಿನಾಂಕವನ್ನು ನಿಗದಿಪಡಿಸಲಾಯಿತು. ಕೊನೆಯದ್ದಾಗಿ ಬಂಗಾಡಿ ಕಂಬಳವನ್ನು ಮಾಡಲಾಗುವುದು ಆದರೆ ದಿನಾಂಕವನ್ನು ಇನ್ನಷ್ಟೆ ನಿಗಧಿ ಪಡಿಸಲಾಗುವುದೆಂದು ತಿರ್ಮಾನಿಸಲಾಯಿತು.

ಈ ವೇಳೆ ವಾಮಂಜೂರು ತಿರುವೈಲ್ ಗುತ್ತಿನ ಕಂಬಳದ ಯಜಮಾನ ನವೀನ್‍ಚಂದ್ರ ಆಳ್ವ, ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್, ಜಿಲ್ಲಾ ಕಂಬಳ ಸಮಿತಿಯ ಮಾಜಿ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *