Header Ads
Header Ads
Header Ads
Breaking News

ಕಟಪಾಡಿಯಲ್ಲಿ ಕರಾಟೆ ರಾಜ್ಯ ಮಟ್ಟದ ಸಮ್ಮೇಳನ ರಾಜ್ಯದ ವಿವಿಧ ಜಿಲ್ಲೆಗಳಿಂದ ಐದು ನೂರಕ್ಕೂ ಅಧಿಕ ಸದಸ್ಯರು ಭಾಗಿ

ರಾಜ್ಯ ಕರಾಟೆ ಶಿಕ್ಷಕ ಸಂಘದವತಿಯಿಂದ ಕಟಪಾಡಿ ಮಟ್ಟುವಿನ ಕಡಲತೀರದಲ್ಲಿ ಕರಾಟೆಯ ರಾಜ್ಯ ಮಟ್ಟದ ಸಮ್ಮೇಳನ ಹಮ್ಮಿಕೊಂಡಿದ್ದು, ವಿವಿಧ ಜಿಲ್ಲೆಗಳಿಂದ ಐದುನೂರಕ್ಕೂ ಅಧಿಕ ಬ್ಲ್ಯಾಕ್ ಬೆಲ್ಟ್ ಪದವಿಧರರು ಆಗಮಿಸಿದ್ದಾರೆ.

ಈ ಬಗ್ಗೆ ರಾಜ್ಯ ಶಿಕ್ಷಕ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಮಾತನಾಡಿ, ಕಳೆದ ಕೆಲವೇ ವರ್ಷಗಳ ಹಿಂದೆ ಉಡುಪಿಯಲ್ಲೇ ಆರಂಭಗೊಂಡ ಕರಾಟೆ ಶಿಕ್ಷಕರ ಸಂಘದಲ್ಲಿ ಸಾವಿರಾರು ಮಂದಿ ಸದಸ್ಯರಾಗಿದ್ದು, ಇದೀಗ ದೇಶದಲ್ಲೇ ಕರಾಟೆಯನ್ನು ಉನ್ನತ ಮಟ್ಟಕ್ಕೇರಿಸುವ ಮೂಲಕ ಕರಾಟೆ ವಿದ್ಯಾರ್ಥಿಗಳಿಗೆ ಸರ್ಕಾರದ ದೊರಕ ಬಹುದಾದ ಸವಲತ್ತುಗಳನ್ನು ದೊರಕಿಸಿಕೊಡುವುದು ಮಾತ್ರವಲ್ಲ.

ರಾಜ್ಯದ ಎಲ್ಲಾ ಶಿಕ್ಷಕರು ಒಂದಾಗಿ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳುವ ಸದುದ್ಧೇಶ ಇಟ್ಟುಕೊಂಡು ಕಟಪಾಡಿ ಮಟ್ಟುವಿನ ಸುಂದರ ಕಡಲತೀರಲ್ಲಿ ಈ ಸಮ್ಮೇಳನವನ್ನು ನಡೆಸುತ್ತಿದ್ದೇವೆ ಎಂದರು.
ಈ ಸಂಧರ್ಭ ಕರಾಟೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಹಾಗೂ ಕರಾಟೆ ಶಿಕ್ಷಕರಿಗಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಸಂಸ್ಥೆಯ ಗೌರವ ಅಧ್ಯಕ್ಷ ಲಕ್ಷ್ಮೀ ನಾರಾಯಣ ಆಚಾರ್, ಕೋಶಾಧಿಕಾರಿ ರವಿ ಸಾಲ್ಯಾನ್, ಕಾರ್ಯದರ್ಶಿ ರೋಹಿತಾಕ್ಷ ಉಪಸ್ಥಿತರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply