Header Ads
Breaking News

ಕಟಪಾಡಿ ಅಗ್ರಹಾರದಲ್ಲಿ ಜೋಕಾಲಿ ದುರಂತ, ಸೀರೆ ಉರುಳಾಗಿ ಆಡುತ್ತಿದ್ದ ಬಾಲಕಿ ಸಾವು

ಮನೆಯಲ್ಲಿ ಜೋಕಾಲಿ ಆಡುತ್ತಿದ್ದ ವೇಳೆ ಜೋಕಾಲಿ ಕಟ್ಟಿದ ಸೀರೆ ಕುತ್ತಿಗೆಗೆ ಬಿಗಿದು ಬಾಲಕಿ ಮೃತಪಟ್ಟ ಘಟನೆ ಕಟಪಾಡಿ ಅಗ್ರಹಾರದಲ್ಲಿ ಸಂಭವಿಸಿದೆ.
ಕಟಪಾಡಿ ಅಗ್ರಹಾರ ನಿವಾಸಿ, ಪೌರೋಹಿತ್ಯ ವೃತ್ತಿಯ ಶಶಿಧರ್ ಪುರೋಹಿತ್ ಮತ್ತು ಭಾರತಿ ದಂಪತಿಯ ಪುತ್ರಿ 10ರ ಅಭಿಜ್ಞಾ ಮೃತ ಪಟ್ಟವಳು. ಅಭಿಜ್ಞಾ ಸಂಜೆ ೩.೩೦ರ ವೇಳೆಗೆ ಅಕ್ಕ ಮತ್ತು ತಮ್ಮನ ಜತೆಗೂಡಿ, ತನ್ನ ಮನೆಯ ಪರಿಸರದಲ್ಲಿ ಸೀರೆಯಿಂದ ಕಟ್ಟಲಾಗಿದ್ದ ಜೋಕಾಲಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ಬೆಳಕಿಗೆ ಬಂದ ಕೂಡಲೇ ತಾಯಿ ಬೊಬ್ಬೆಹಾಕಿದ್ದು, ಸ್ಥಳೀಯರು ಬಂದು ಬಾಲಕಿಯನ್ನು ಸೀರೆಯ ಉರುಳಿನಿಂದ ಬಿಡಿಸಿ ಆಸ್ಪತ್ರೆಗೆ ಸಾಗಿಸಿದರು.
ಆದರೆ ಅಷ್ಟರಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಳು ಎನ್ನಲಾಗಿದೆ. ಅಭಿಜ್ಞಾ ಶಂಕರ ಪುರ ಸೈಂಟ್ ಜೋನ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಾಲ್ಕನೇ ತ