Header Ads
Breaking News

ಕಟಪಾಡಿ ಪೇಟೆಬೆಟ್ಟು ಕೊರಗಜ್ಜನ ದಯೆಯಿಂದ ಗೆದ್ದು ಬಂದೆ : ಶೈನ್ ಶೆಟ್ಟಿ ಮನದಾಳದ ಮಾತು

ಪವಿತ್ರ ಪುಣ್ಯ ಕ್ಷೇತ್ರದಲ್ಲೊಂದು ಕಟಪಾಡಿ ಪೇಟೆಬೆಟ್ಟು ಕೊರಗಜ್ಜ ಕ್ಷೇತ್ರ, ಕೊರಗ್ಗಜ್ಜನ ದಯೆಯಿಂದ ಕಠಿಣವಾಗಿ ಬಿಗ್‍ಬಾಸ್‍ನಲ್ಲಿ ಸುಲಭವಾಗಿ ಗೆಲುವು ಸಾಧಿಸುವಂತ್ತಾಯಿತು ಎಂಬುದಾಗಿ ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿಯವರ ಮನದಾಳದ ಮಾತು. ಕಟಪಾಡಿ ಪೇಟೆಬೆಟ್ಟು ಕೊರಗ್ಗಜ್ಜನ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸ್ವೀಕರಿಸಿದ ಬಳಿಕ ವಿ4 ನ್ಯೂಸ್‍ನೊಂದಿಗೆ ಮಾತನಾಡಿದ ಅವರು, ಸ್ವರ್ಧೆಯಲ್ಲಿ ಪಾಲ್ಗೊಳ್ಳುವ ಮೊದಲು ಈ ಕ್ಷೇತ್ರದಲ್ಲಿ ನನ್ನ ಗೆಲುವಿಗಾಗಿ ಪ್ರಾರ್ಥಿಸಿದ್ದು ನಮ್ಮ ಪ್ರಾರ್ಥನ ಫಲನೀಡಿದೆ. ಇದೀಗ ಈ ಕ್ಷೇತ್ರಕ್ಕೆ ಆಗಮಿಸಿದಾಗ ಅಭಿಮಾನಿಗಳು ತೋರಿದ ಅಭಿಮಾನ, ಶಾಲಾ ಮಕ್ಕಳು ತೋರಿಸಿದ ಪ್ರೀತಿಯಿಂದ ಮನ ತುಂಬಿ ಬಂದಿದೆ, ಈ ಅಭಿಮಾನ ಪ್ರೀತಿಯನ್ನು ಯಾವತ್ತೂ ಮರೆಯೋದಿಲ್ಲ ಎಂದರು.

ಶೈನ್ ಶೆಟ್ಟಿಯ ತಂದೆ ಶರತ್‍ಚಂದ್ರ ಶೆಟ್ಟಿ ಮಾತನಾಡಿ, ಈ ಕ್ಷೇತ್ರದ ಪ್ರಮುಖರು ಕೊರಗ್ಗಜ್ಜನಿಂದ ಬೇಡಿ ನೀಡಿದ ಆಶ್ರೀರ್ವಾದವೇ ನನ್ನ ಮಗನ ಗೆಲುವಿಗೆ ಶ್ರೀರಕ್ಷೆ, ಮಗ ಬಿಗ್‍ಬಾಸ್ ಮನೆಯಲ್ಲಿ ಸ್ವರ್ಧೆಯಲ್ಲಿರುವ ದಿನದಲ್ಲಿ ನಿರಂತರವಾಗಿ ಬಂದು ಕೊರಗ್ಗಜ್ಜನಲ್ಲಿ ಪ್ರಾರ್ಥಿಸುತ್ತಿದೆ, ಈ ಕ್ಷೇತ್ರದ ಮಹಿಮೆಯೆ ನನ್ನ ಮಗನ ಗೆಲುವಿಗೆ ಕಾರಣವಾಗಿದೆ, ಯಾವತ್ತೂ ನಮ್ಮ ಕುಟುಂಬ ಈ ಕ್ಷೇತ್ರದ ಭಕ್ತರಾಗಿಯೆ ಉಳಿಯಲಿದ್ದೇವೆ ಎಂದರು. 

ಇದೇ ಸಂದರ್ಭ ಶ್ರೀಕ್ಷೇತ್ರದ ವತಿಯಿಂದ ಸೈನ್ ಶೆಟ್ಟಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸೈನ್ ಶೆಟ್ಟಿ ಆಗಮಿಸಿದ ಸುದ್ಧಿ ತಿಳಿಯುತ್ತಿದಂತ್ತೆ ಸ್ಥಳೀಯ ಶಾಲಾ ಮಕ್ಕಳು ಸಹಿತ ಅಭಿಮಾನಿಗಳು ಶೈನ್ ಶೆಟ್ಟಿಯ ಹಸ್ತಾಕ್ಷಾರ ಹಾಗೂ ಸೆಲ್ಫಿ ಪೋಟೋಗಳಿಗೆ ಮುಗಿಬಿದ್ದಿದ್ದು, ಅವರಿಂದ ತಪ್ಪಿಸಿಕೊಳ್ಳಲು ಶೈನ್ ಶೆಟ್ಟಿ ಬಹಳಷ್ಟು ಶ್ರಮ ಪಡ ಬೇಕಾಯಿತು.

Related posts

Leave a Reply

Your email address will not be published. Required fields are marked *