Header Ads
Header Ads
Breaking News

ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸಮಸ್ಯೆ, ಮೂವತ್ತಯಿದು ಮನೆಯವರಿಗೆ ಗೃಹ ಬಂಧನ

ಕಟಪಾಡಿ ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿಯ ಹೆಸರಲ್ಲಿ ಕಟಪಾಡಿ ಏಣಗುಡ್ಡೆ ಮಿತ್ತೂಟ್ಟುವಿನ ಸುಮಾರು ೩೫ ಮನೆಗಳಿಗೆ ಸಂಪರ್ಕ ರಸ್ತೆ ಇಲ್ಲದ ಪರಿಣಾಮ ಗೃಹ ಬಂಧನ ಅನುಭವಿಸುವಂತ್ತಾಗಿದೆ.
ಈ ಭಾಗದ ಹಿರಿಯರಾದ ವಾಸು ಭಂಡಾರಿ ಹೆದ್ದಾರಿ ನಿರ್ಮಾಣದ ಸಂದರ್ಭ ರಸ್ತೆ ನಿರ್ಮಾಣಕ್ಕಾಗಿ ಆ ಸ್ಥಳವನ್ನು ಎತ್ತರಗೊಳಿಸಿದ್ದರಿಂದ, ಮಿತ್ತೂಟ್ಟುವಿನ ಸುಮಾರು ೩೫ ನಿವಾಸಿಗರಿಗೆ ಕಟಪಾಡಿ ಪೇಟೆಗೆ ನೇರ ಸಂಪರ್ಕವಿದ್ದ ದಾರಿ ಮುಚ್ಚಿ ಹೋಗಿದೆ. ಈ ಬಗ್ಗೆ ಕಟಪಾಡಿ ಗ್ರಾಮ ಪಂಚಾಯಿತಿ ಸಹಿತ ಈ ಭಾಗದ ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಈ ಭಾಗದ ಶಾಸಕ ವಿನಯ ಕುಮಾರ್ ಸೊರಕೆಯವರ ಗಮನಕ್ಕೆ ತಂದಿದ್ದೇವೆಯಾದರೂ ಈವರೆಗೂ ಅವರು ನಮ್ಮ ಮನವಿಗೆ ಸ್ಪಂದಿಸದಿರುವುದಿಂದ, ಹಿರಿಯರು ಗೃಹ ಬಂಧನ ಅನುಭವಿಸುವಂತ್ತಾದರೆ.
ಓಟು ಕೇಳುವುದಕ್ಕೂ ನಮ್ಮ ಮನೆಕಡೆಗೆ ಬಾರದ ಜನಪ್ರತಿನಿಧಿಗಳು ನಾವು ಪೇಟೆಯಲ್ಲಿ ಸಿಕ್ಕಿದಾಗ ಮತ ಬೇಡಿ ಕೈತೊಳೆದು ಕೊಂಡಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬಂದ ಬಳಿಕವಾದರೂ ನಮ್ಮ ನೋವಿಗೆ ಧ್ವನಿಯಾಗುತ್ತಾರೆ ಎಂಬ ಆಶಾಭಾವನೆ ನಮ್ಮಲ್ಲಿತ್ತಾದರೂ, ಆ ಬಳಿಕ ನಮ್ಮ ಕಡೆ ನೋಡುವುದಕ್ಕೂ ಬಂದಿಲ್ಲ ಎಂದು ಮಹಿಳೆಯೋರ್ವಳು ಹೆದ್ದಾರಿ ಇಲಾಖೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.

Related posts

Leave a Reply