Header Ads
Header Ads
Breaking News

ಕಟೀಲಿನ ಆರು ಮೇಳಗಳು ಸುಲಲಿತವಾಗಿ ನಡೆಯುತ್ತಿದೆ ದೇವಳದ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ಹೇಳಿಕೆ

ಕಲ್ಲಾಡಿ ದೇವಿಪ್ರಸಾದ್ ಶೆಟ್ಟರು ಕಟೀಲು ಆರೂ ಮೇಳಗಳನ್ನು ಸುಲಲಿತವಾಗಿ ನಡೆಸುತ್ತಿದ್ದಾರೆ ಇದರಲ್ಲಿ ದೇವಳದ ಆಡಳಿತ ಮಂಡಳಿಗೆ ಯಾವುದೇ ಸಂಶಯ ಇಲ್ಲ ಎಂದು ಕಟೀಲು ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು.ಅವರು ಕಟೀಲು ಮೇಳದ ಬಗೆಗಿನ ಗೊಂದಲಗಳ ಬಗ್ಗೆ ಕಟೀಲು ದೇವಳದ ಆಡಳಿತ ಮಂಡಳಿ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟರು 2005ರಲ್ಲಿ ಕಟೀಲು ಮೇಳ ವಹಿಸಿಕೊಳ್ಳುವ ಸಂದರ್ಭದಲ್ಲಿ ನಾಲ್ಕು ಮೇಳಗಳು ಇದ್ದು ಈಗ ಆರು ಮೇಳಗಳು ಆಗಿದೆ. ಸುಮಾರು 350 ಜನ ಕಲಾವಿದರು ಇದರಿಂದ ಜೀವನ ಸಾಗಿಸುತ್ತಾರೆ.

ಕಳೆದ ಬಾರಿ ಮೇಳದಿಂದ ಕೈ ಬಿಟ್ಟ ಕಲಾವಿದರು ನಮ್ಮನ್ನು ಮೇಳದಿಂದ ಹೊರ ಹಾಕಿದ್ದಾರೆ ಎಂದು ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದು, ಯಕ್ಷಗಾನ ಮೇಳದಲ್ಲಿ ಕಲಾವಿದರು ಆರು ತಿಂಗಳ ಕಾಲದ ಅವದಿಗೆ ಮಾತ್ರ ತೆಗೆದುಕೊಳ್ಳಲಾಗುತ್ತದೆ, ಈ ಬಗ್ಗೆ ಸೆಕ್ಷನ್ರ38 ರಿಜಿಸ್ಟರ್ ನಲ್ಲಿ ಉಲ್ಲೇಖವಿದೆ ಆದರಿಂದ ಕಲಾವಿದರನ್ನು ಹೊರ ಹಾಕುವ ಪ್ರಶ್ನೆಯೇ ಇಲ್ಲ ಸುದ್ದಿಗೋಷ್ಟಿಯಲ್ಲಿ ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅನಂತಪದ್ಮನಾಭ ಆಸ್ರಣ್ಣ, ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply