Header Ads
Header Ads
Breaking News

ಕಟೀಲು:ಆರು ಯಕ್ಷಗಾನ ಮೇಳಗಳ ಸೇವೆ ಬಯಲಾಟಗಳ ತಿರುಗಾಟದ ಆರಂಭ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ ೨೦೧೮-೧೯ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟದ ಆರಂಭ ರವಿವಾರ ನಡೆಯಿತು. ಪ್ರಥಮ ಸೇವೆಯಾಟದ ಪ್ರಯುಕ್ತ ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆರು ಮೇಳದ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದರು. ಆರು ಮೇಳಗಳ ದೇವರ ಪೆಟ್ಟಿಗೆ ,ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಳದಲ್ಲಿ ಪೂಜೆ ಬಳಿಕ ಶಾಲಾ ಸರಸ್ವತೀ ಸದನದಲ್ಲಿನ ಚೌಕಿಯಲ್ಲಿ ಪೂಜೆ ನಡೆಯಿತು. ದೇವಳದ ರಥಬೀದಿಯಲ್ಲಿ ನಿರ್ಮಿಸಿದ ಆರು ರಂಗಸ್ಥಳಗಳಲ್ಲಿ ಬಯಲಾಟ ನಡೆಯಿತು.

ಗೆಜ್ಜೆ ಹಸ್ತಾಂತರಿಸುವ ಪ್ರಕ್ರಿಯೆ ಸಂದರ್ಭ ಆರೂ ಮೇಳಗಳ ಪ್ರಧಾನ ಬಾಗವತರು ಬಾಗವಹಿಸಬೇಕಾಗಿದ್ದು ಕಳೆದ ಬಾರಿ ನಾಲ್ಕನೇ ಮೇಳದ ಪ್ರಧಾನ ಬಾಗವತರಾಗಿದ್ದ ಪಟ್ಲ ಸತೀಶ್ ಶೆಟ್ಟಿಯವರು ಬಾಗವಹಿಸಲಿಲ್ಲ, ಈ ಬಗ್ಗೆ ಕಲಾಭಿಮಾನಿಗಳಲ್ಲಿ ಮತ್ತು ಪಟ್ಲ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಗಳಿದ್ದಿ ಚರ್ಚೆಗೆ ಗ್ರಾಸವಾಗಿತ್ತು, ಈ ಬಾರಿ ಆಟ ಮುಗಿದ ನಂತರ ವೀಳ್ಯವನ್ನು ಪ್ರಧಾನ ಬಾಗವತರೇ ತೆಗೆದುಕೊಳ್ಳಬೇಕು ಎಂಬ ನಿಯಮ ಮಾಡಿದ್ದರು, ಆರೋಗ್ಯದ ಸಮಸ್ಯೆ ಇದ್ದ ಕಾರಣ ನನಗೆ ಯಕ್ಷಗಾನದ ಕೊನೆಯ ಬಾಗವನ್ನು ಬಿಟ್ಟು ಬೇರೆ ಸಂದರ್ಭ ಬಾಗವತಿಗೆ ಮಾಡಲು ಅವಕಾಶ ಕಲ್ಪಿಸಿ ಎಂದು ಯಜಮಾಜರ ಬಳಿ ವಿನಂತಿಸಿದ್ದು, ಈ ಸಮಸ್ಯೆ ಸೇವೆಯಾಟ ಆರಂಬವಾಗುವವರೆಗೆ ಬಗೆಹರಿಯದ ಕಾರಣ ಈ ಬಗ್ಗೆ ಪಟ್ಲ ಬಾಗವತರಿಗೆ ಪ್ರಾರಂಭದ ದಾರ್ಮಿಕ ಪ್ರಕ್ರಿಯೆಯಲ್ಲಿ ಬಾಗವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ತಡ ರಾತ್ರಿ ಪಟ್ಲ ಬಾಗವತರನ್ನು ಪೂಂಜರು ಪ್ರದಾನ ಬಾಗವತರಾಗಿರುವ ಒಂದನೇ ಸೆಟ್ ಗೆ ಹಾಕುವ ನಿರ್ದಾರ ತೆಗೆದುಕೊಳ್ಳಲಾಗಿದು ಈ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ.

Related posts

Leave a Reply