

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೀಪೋತ್ಸವ ನಡೆಯಿತು. ರಥಬೀದಿಯಲ್ಲಿ ಚಂದ್ರಮಂಡಲದಲ್ಲಿ ರಥೋತ್ಸವ ನಡೆದು ಬಳಿಕ ಮೊದಲ ಬಾರಿಗೆ ಕುದ್ರುವಿನಲ್ಲಿ ಹಣ್ಣುಗಳು, ತರಕಾರಿ ಹೂವುಗಳಿಂದ ನಿರ್ಮಿಸಲಾದ ಗುರ್ಜಿಯಲ್ಲಿ ದೀಪಾಲಂಕೃತ ಮಂಟಪದಲ್ಲಿ ಶ್ರೀ ದೇವರ ಬಲಿಮೂರ್ತಿಯನ್ನಿತ್ತು ಪೂಜೆ ನಡೆಯಿತು. ರಥಬೀದಿಯಿಂದ ಕುದ್ರುವರೆಗೆ ಸಹಸ್ರಾರು ಹಣತೆಗಳನ್ನಿಡಲಾಗಿತ್ತು.