Header Ads
Header Ads
Header Ads
Breaking News

ಕಟೀಲು ದುರ್ಗಾಪರಮೇಶ್ವರೀ ದೇವಳಕ್ಕೆ ಲಲಿತ ಪಂಚಮಿಯ ಸಾವಿರಾರು ಭಕ್ತರು ಭೇಟಿ ನೀಡಿದ್ದು, ರಾತ್ರಿ ಅನ್ನಪ್ರಸಾದ ಸ್ವೀಕರಿಸಿದ ಭಕ್ತರಿಗೆ ದುರ್ಗೆಯ ಶೇಷ ವಸ್ತ್ರ ವಿತರಿಸಲಾಯಿತು ಈ ಬಗ್ಗೆ ಒಂದು ವರಧಿ ಇಲ್ಲಿದೆ ನೋಡಿ.

ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಬಹಳ ಪ್ರಮುಖ್ಯತೆಯನ್ನು ಪಡೆದಿದೆ, ಈ ಸಂದರ್ಭ ದೇವಳಕ್ಕೆ ಲಕ್ಷಾಂತರ ಮಂದಿ ಭಕ್ತರು ಬೇಟಿ ನೀಡುತ್ತಾರೆ, ಬೇರೆ ದೇವಸ್ಥಾನಗಳಲ್ಲಿನ ನವರಾತ್ರಿ ಉತ್ಸವಗಿಂತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿ ಬಿನ್ನತೆಯಿಂದ ಕೂಡಿದೆ.

ದೇಗುಲದಲ್ಲಿನ ನವರಾತ್ರಿ ಉತ್ಸವದಲ್ಲಿ ಲಲಿತ ಪಂಚಮಿ ಅತೀ ಪ್ರಮುಖ್ಯವನ್ನು ಪಡೆದಿದೆ, ದುರ್ಗೆಗೆ ಭಕ್ತರಿಂದ ಅರ್ಪಿಸಲ್ಪಡುವ ಸೀರೆಯನ್ನು, ಚಂಡಿಕಾ ಹೂಮ, ರಂಗಪೂಜೆ, ಅನ್ನಧಾನ ಮತ್ತು ವಿಶೇಷ ಅತಿಥಿಗಳು ಬಂದಾಗ ಪ್ರಸಾದ ರೂಪದಲ್ಲಿ ಕೊಟ್ಟರೆ, ಉಳಿದಂತೆ ಲಲಿತಾ ಪಂಚಮಿ ದಿನ ರಾತ್ರಿ ಅನ್ನ ಪ್ರಸಾದ ಸ್ವೀಕರಿಸುವ ಮಹಿಳಾ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ, 2-3 ವರ್ಷದ ಹಿಂದೆ ಒಂದು ಸೀರೆಯನ್ನು ಕಣವಾಗಿ ಪರಿವರ್ತಿಸಿ ನೀಡಲಾಗುತ್ತಿತ್ತು ಕಳೆದ ಎರಡು ವರ್ಷದಲ್ಲಿ ಇಡೀ ಸೀರೆಯನ್ನು ವಿತರಿಸಲಾಗುತ್ತಿತ್ತು ಈ ಬಾರಿ ಸೀರೆಯ ಪ್ರಮಾಣ ಕಡಿಮೆ ಇದ್ದುದರಿಂದ ಕಣವಾಗಿ ಪರಿವರ್ತಿಸಲಾಗಿದ್ದು. ಈ ಬಾರಿ ಸುಮಾರು 25 ಸಾವಿರ ಮಂದಿ ಮಹಿಳಾ ಭಕ್ತರಿಗೆ ಸೀರೆ ವಿತರಿಸಲಾಯಿತು.


ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ದುರ್ಗೆಗೆ ಸೀರೆಯನ್ನು ಅರ್ಪಿಸುವ ಹರಕೆಯನ್ನು ಹೊತ್ತಿರುತ್ತಾರೆ, ಆ ಸೀರೆಯ ದೇವರಿಗೆ ಅರ್ಪಿತವಾದ ಮೇಲೆ ಸಂಗ್ರಹಿಸಿ ಇಡಲಾಗುತ್ತದೆ, ಪ್ರತೀ ವರ್ಷ ಲಲಿತಾ ಪಂಚಮಿಯಂದು ಇದನ್ನು ಭಕ್ತರಿಗೆ ನೀಡುವ ಕ್ರಮ ಹಿಂದಿನಿಂದಲೂ ನಡೇದುಕೊಂಡು ಬಂದಿದೆ, ಸೋಮವಾರದಂದು ಲಲಿತಾ ಪಂಚಮಿ ಆದರಿಂದ ಸಾವಿರಾರು ಜನರು ಬೆಳಿಗ್ಗೆಯಿಂದಲೇ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು.

ರಾತ್ರಿಯ ಅನ್ನಪ್ರಸಾದ ವಿತರಣೆ ಭಕ್ತರ ಸಂಖ್ಯೆ ಹೆಚ್ಚು ಇದ್ದ ಕಾರಣ ಸಂಜೆ 5.30 ಕ್ಕೆ ಪ್ರಾರಂಭವಾದ ಅನ್ನ ಪ್ರಸಾದ ತಡ ರಾತ್ರಿ 3 ಗಂಟೆಯವರೆಗೂ ಮುಂದುವರಿದಿದ್ದು ದೂರದ ಉಜಿರೆ, ಬೇಳ್ತಂಗಡಿ, ಕಾರ್ಕಳ ಮತ್ತಿತರ ಕಡೆಗಳಿಂದ ಭಕ್ತರು ಆಗಮಿಸುತ್ತಿದ್ದರು. ಭಕ್ತರನ್ನು ನಿಯಂತ್ರಿಸಲು, ಉಟ ಬಡಿಸಲು ಕಟೀಲು ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ನೂರಾರು ಸ್ವಯಂ ಸೇವಾಕರು ಪ್ರತಿಪಲಾಪೇಕ್ಷೆ ಇಲ್ಲದೆ ದುಡಿಯುತ್ತಾರೆ.

ವರಧಿ; ನಿಶಾಂತ್ ಕಿಲೆಂಜೂರು.

Related posts

Leave a Reply