Header Ads
Header Ads
Breaking News

ಕಟೀಲು ಯಕ್ಷಗಾನ ಮೇಳ ಏಲಂ ಆಗಲಿದೆಯೇ?

 

ಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಕರಾವಳಿಯ ಪ್ರಸಿದ್ಧ ಕ್ಷೇತ್ರ. ಈ ಕ್ಷೇತ್ರದಲ್ಲಿ ದೇವಿ ಪೂಜೆಯ ಜೊತೆಗೆ ಯಕ್ಷಗಾನಕ್ಕೂ ಪ್ರಸಿದ್ಧ ಸ್ಥಾನವಿದೆ. ಅದ್ರೆ ಇದೀಗ ಕ್ಷೇತ್ರದ ೬ ಯಕ್ಷಗಾನ ಮೇಳಗಳು ಸರ್ಕಾರದ ವಶವಾಗುತ್ತದೆ ಎಂಬ ಮಾತು ಕೇಳಿ ಬಂದಿದೆ. ಕರಾವಳಿಯ ಗಂಡುಕಲೆ ಯಕ್ಷಗಾನ. ಈ ಭಾಗದಲ್ಲಿ ಯಕ್ಷಗಾನ ಕೇವಲ ಕಲೆಯಾಗಿ ಉಳಿದಿಲ್ಲ. ಇದು ಆಧಾರದನ ಕ್ರಮವಾಗಿಯೂ ಗಮನ ಸೆಳೆದಿದೆ. ಅದರಲ್ಲೂ ಕಟೀಲಿನ ದುರ್ಗಾಪರಮೇಶ್ವರೀ ಯಕ್ಷಗಾನಕ್ಕೆ ಪೂಜಾನೀಯ ಸ್ಥಾನವಿದೆ. ಯಕ್ಷಗಾನ ಆಟವನ್ನು ಆಡಿಸಿದರೆ, ದೇವರ ಅನುಗ್ರಹ ಸಿಗುತ್ತೆ ಎಂಬ ನಂಬಿಕೆ ಇದೆ. ಯಕ್ಷಗಾನ ಮೂಲಕ ದೇವಿ ಮನೆಗೆ ಬರುತ್ತಾಳೆ ಎಂಬುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಹೀಗಾಗಿ ಕಟೀಲಿನ6 ಮೇಳಗಳಿಗೂ ಇನ್ನು ಮುಂದಿನ 20 ವರುಷಕ್ಕೂ ಹರಕೆ ಯಕ್ಷಗಾನಗಳು ಈಗಾಗಲೇ ಬುಕ್ಕಿಂಗ್ ಆಗಿದೆ.ಅದ್ರೆ ಈ ಮಧ್ಯೆಯೇ ಇಷ್ಟೊಂದು ಖಾಸಗಿ ಮಧ್ಯಸ್ಥಿತಿಕೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಸರ್ಕಾರದ ವಶವಾಗುವ ಸೂಚನೆ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಮಾಡಿದ ಶಿಫಾರಸ್ಸಿನಲ್ಲಿ ಕಟೀಲಿನ6 ಮೇಳಗಳನ್ನು ಏಲಂ ಮಾಡುವಂತೆ ಸೂಚಿಸಲಾಗಿದೆ. ಯಕ್ಷಗಾನ ಮೇಳಗಳನ್ನ ಖಾಸಗಿ ವಂಶ ಪಾರಂಪರೆ ಬಂದ ಖಾಸಗಿ ಯಜಮಾನಿಕೆ ಮೂಲಕ ನಡೆಸಲಾಗುತ್ತಿತ್ತು.

ಹೀಗಾಗಿ ಯಕ್ಷಗಾನದಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿಲ್ಲ. ಇದೀಗ ಕಟೀಲು ಮೇಳದಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ಪ್ರಮೀಳಾ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ. ಇನ್ನು ಈಗಾಗಲೇ ಕೆಲವೊಂದು ಕಲಾವಿದರು ಜಿಲ್ಲಾಧಿಕಾರಿ ಅವರನ್ನ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.ದೇವಸ್ಥಾನ ಮೂಲದ ಪ್ರಕಾರ , ಮುಂದಿನ 40 ವರ್ಷಕ್ಕೆ ಬೇಕಾಗುಷ್ಟು ಯಕ್ಷಗಾನ ಪ್ರದರ್ಶನ ಬುಕ್ಕಿಂಗ್‌ಗೆ ಬಂದಿವೆ. ಕಟೀಲಿನ ೬ ಮೇಳದಲ್ಲೂ ೩೫೦ರಿಂದ 380ಕ್ಕೂ ಅಧಿಕ ಕಲಾವಿದರು ಇದ್ದಾರೆ. ಈ ಮೇಳಗಳು6 ತಿಂಗಳ ತಿರುಗಾಟದಲ್ಲಿ 180ಕ್ಕೂ ಅಧಿಕ ಯಕ್ಷಗಾನ ಬಯಲಾಟ ಪ್ರದರ್ಶನ ನೀಡುತ್ತಿವೆ. 6 ಮೇಳದಲ್ಲೂ 7.65 ಕೋಟಿ ಹಣ ಸಂಗ್ರಹವಾಗುತ್ತಿದೆ. ಇದರಲ್ಲಿ ಯಕ್ಷಗಾನ ಕಲಾವಿದರ ಸಂಬಳ ಹಾಗೂ ಇತರ ಖರ್ಚ ಅಂತ ಹೇಳಿದಾಗ ೪ ಕೋಟಿ ರೂಪಾಯಿ ಪರಿಗಣಿಸಬಹುದಾಗಿದೆ. ಇನ್ನು ಉಳಿದ ಹಣ ಎಲ್ಲಿ ಹೋಗುತ್ತೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಒಟ್ಟಾರೆ ಕಟೀಲು ದೇವಿಯ ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಯುವುದರಿಂದ ಮೇಳ ಏಲಂ ಮೂಲಕ ತಿರುಗಾಟ ನಡೆಸುವುದು ಸುಲಭದ ಮಾತೇ ಎಂಬ ಪ್ರಶ್ನೆ ಭಕ್ತ ಸಮೂಹದಿಂದ ಪರ – ವಿರೋಧಗಳ ಮಾತುಗಳು ಕೇಳಿ ಬರುತ್ತಿದೆ.

Related posts

Leave a Reply