Header Ads
Breaking News

ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತು ಸಿಕ್ಕಿಲ್ಲ : ಮಂಗಳೂರಿನ ಸಿಐಟಿಯು ವತಿಯಿಂದ ಧರಣಿ

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಕೋವಿಡ್ ಲಾಕ್‍ಡೌನ್ ಪರಿಹಾರ ಬಾಕಿ ಇರುವ ಕಟ್ಟಡ ಕಾರ್ಮಿಕರಿಗೆ ಕೂಡಲೇ ನೀಡಿ, ಆನ್‍ಲೈನ್ ನೋಂದಣಿ ಅರ್ಜಿಗಳು ಪರಿಶೀಲನೆ ಆಗಬೇಕು. ಸ್ಕಾಲರ್‍ಶಿಪ್ ಬಾಕಿ ಇರುವ ಅರ್ಜಿಗಳು ಕೂಡಲೇ ವಿಲೇವಾರಿ ಆಗಬೇಕು. ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಟ್ಟಡ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಜಯಂತ್ ನಾಯ್ಕ್ ಅವರು, ಲಾಕ್‍ಡೌನ್ ಸಂದರ್ಭ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ 5000 ರೂ ಪರಿಹಾರ ಘೋಷಣೆ ಮಾಡಿದೆ. ಆದರೆ ಲಾಕ್‍ಡೌನ್ ಕಳೆದು ತಿಂಗಳು ಕಳೆದರೂ ಇನ್ನೂ ನಮ್ಮ ಖಾತೆಗೆ ಹಣ ಬಿದ್ದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related posts

Leave a Reply

Your email address will not be published. Required fields are marked *